ಬಾಗಲಕೋಟೆ: ಕುಟುಂಬವೊಂದಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಯುವಕನನ್ನು ಬಂಧಿಸುವಲ್ಲಿ ಇಲಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.ಸುಲೇಮಾನ್ ಬಂಧಿತ ಆರೋಪಿ.
ಸುಜಿತ್ ಎಂಬ ವ್ಯಾಪಾರಿಯ 14 ವಯಸ್ಸಿನ ಮಗನೊಂದಿಗೆ ಸ್ನೇಹ ಬೆಳೆಸಿದ್ದ ಸುಲೇಮಾನ್ ನಂತರ
ಮಗನನ್ನ ಕೊಲೆ ಮಾಡುತ್ತೇನೆಂದು ಸುಜಿತ್ ಪತ್ನಿಗೆ ಬ್ಲ್ಯಾಕ್ ಮೇಲ್ ಮಾಡಿ, 5 ಲಕ್ಷ ನಗದು, 105 ಗ್ರಾಮ್ ಬಂಗಾರ ಸೇರಿದಂತೆ ಸುಜಿತ್ ನಿಂದ 3 ಲಕ್ಷ ಹಣ ಪಡೆದಿದ್ದ.
ಹಣ ಖಾಲಿಯಾದಂತೆ ಮತ್ತೆ ಮತ್ತೆ ಹಣ ಪೀಕಲು ಸಂಚು ಮಾಡುತ್ತಲೇ ಇದ್ದ ಈ ಭೂಪ.
ನಂತರ ರಾತ್ರಿ ಸುಜಿತ್ ಮನೆ ಮುಂದಿನ ಎರಡು ವಾಹನಗಳಿಗೆ ಬೆಂಕಿ ಇಟ್ಟು ವಿಕೃತಿ ಮೆರೆದಿದ್ದ, ಈತನ ಉಪಟಳ ಸಹಿಸಲಾಗದೆ
ಸುಜಿತ್ ಕುಟುಂಬ ಪೊಲೀಸ್ ಕಂಪ್ಲೇಟ್ ನೀಡಿದ್ದಾರೆ.
ಪೊಲೀಸರು ದೂರು ದಾಖಲಿಸಿ ವಿಚಾರಣೆ ನಡೆಸಿದಾಗ ಬೈಕ್ ಸುಟ್ಟಿರೋ ಬಗ್ಗೆ ತಪ್ಪೊಪ್ಪಿಕ್ಕೊಂಡು, ಈ ಹಿಂದೆ ಬ್ಲ್ಯಾಕ್ ಮೇಲೆ ಮಾಡಿದ್ದ ಬಗ್ಗೆಯೂ ಒಪ್ಪಿಕೊಂಡಿದ್ದಾನೆ.
ಆರೋಪಿಯಿಂದ ನಗದು, ಬಂಗಾರ ವಶಕ್ಕೆ ಪಡೆದು ಆತನನ್ನು ಜೈಲಿಗಟ್ಟಿದ್ದಾರೆ ಪೋಲಿಸರು.
ಜಿಲ್ಲೆಯ ಇಲಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
PublicNext
25/11/2021 08:06 pm