ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೀವ ತೆಗೆದ ಟೊಮೆಟೋ : ಜೀವಕ್ಕೆ ಜೀವ ತೆಗೆದು ಸೇಡು

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಚರಕಮಟ್ಟೇನಹಳ್ಳಿ ಗ್ರಾಮದಲ್ಲಿ ಟೊಮೆಟೋ

ಬೆಳೆಗೆ ಹಾಕಿದ ವಿದ್ಯುತ್ ತಂತಿ ತಗುಲಿ ಯುವಕ ಸಾವನ್ನಪ್ಪಿದ ಹೃದಯಾವಿದ್ರಾವಕ ಘಟನೆ ನಡೆದಿದೆ.

ವಸಂತರಾವ್ ಎಂಬಾತನೇ ಮೃತ ವ್ಯಕ್ತಿಯಾಗಿದ್ದು ಕಳೆದುಹೋದ ಕುರಿ ಹುಡುಕುವ ವೇಳೆ ಅಶ್ವಥರಾವ್ ಎಂಬುವರ ತೋಟಕ್ಕೆ ಹಾಕಿದ್ದ ವಿದ್ಯುತ್ ಪ್ರವಹಿಸಿ ಇಹಲೋಕ ತ್ಯಜಿಸಿದ್ದಾರೆ. ಇನ್ನು ಯುವಕ ಸಾಯುತ್ತಿದ್ದಂತೆ ಟೊಮೆಟೋ ತೋಟಕ್ಕೆ ವಿದ್ಯುತ್ ಹಾಕಿದ್ದನ್ನು ಪ್ರಶ್ನಿಸಿದ ವಸಂತರಾವ್ ಸಂಬಂಧಿಕರು ಪ್ರಶ್ನಿಸಿದ್ದಾರೆ. ಈ ವೇಳೆ ತೋಟದ ಮಾಲೀಕ ಅಶ್ವಥರಾವ್ ಅಸಭ್ಯವಾಗಿ ನಡೆದುಕೊಂಡ ಅವ್ಯಾಚ್ಯವಾಗಿ ನಿಂದಿಸಿದ್ದ ಈ ವೇಳೆ ರೊಚ್ಚಿಗೆದ್ದ ವಸಂತರಾವ್ ಸಂಬಂಧಿಕರು ತೋಟದ ಮಾಲೀಕ ಅಶ್ವಥರಾವ್ ರನ್ನ ಕೊಂದಿದ್ದಾರೆ.

ಟೊಮೆಟೋ ಬೆಲೆ ಗಗನಕ್ಕೇರಿದ್ದರಿಂದ ಗ್ರಾಮದ ಕೆಲವರಿಂದ ನಿತ್ಯ ಕಳ್ಳತನದ ಕೃತ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಮಾಲೀಕ ಕಳ್ಳತನ ಮಾಡದಂತೆ ಗ್ರಾಮಸ್ಥರಿಗೆ ಮನವಿ ಮಾಡಿದ್ದ ಮನವಿ ಮಾಡಿದ ಮೇಲೂ ಕಳ್ಳತನ ಮಾಡುತ್ತಿದ್ದ ಕಿಡಿಗೇಡಿಗಳಿಂದ ರೋಸಿದ ಮಾಲೀಕ ಕಳ್ಳತನ ಮುಂದುವರೆಸಿದರೆ ಟೊಮೆಟೋ ತೋಟಕ್ಕೆ ವಿದ್ಯುತ್ ತಂತಿ ಹರಿಸುವ ಎಚ್ಚರಿಕೆಯನ್ನು ನೀಡಿದ್ದ ಎನ್ನಲಾಗಿದೆ.

ಆದ್ರೆ ಸಿಲ್ಲಿ ಟೊಮೆಟೋಗಾಗಿ ಎರಡು ಸಾವಾಗಿದ್ದಂತೂ ದುರಂತ.

ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Edited By : Nirmala Aralikatti
PublicNext

PublicNext

25/11/2021 12:27 pm

Cinque Terre

29.05 K

Cinque Terre

1