ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈ ಬಣ್ಣ ಕಪ್ಪು ಎಂದು ತಲಾಕ್ ಕೊಟ್ಟ ಗಂಡನ ವಿರುದ್ಧ ಸಿಡಿದೆದ್ದ ಪತ್ನಿ

ಲಕ್ನೋ: ಭಾರತ ದೇಶದಲ್ಲಿ ತ್ರಿವಳಿ ತಲಾಕ್ ನಿಷೇಧವಾಗಿದೆ. ಆದರೂ ಆಗಾಗ ತಲಾಕ್ ಪ್ರಕರಣಗಳು ಕೇಳಿ ಬರ್ತಿವೆ. ಉತ್ತರ ಪ್ರದೇಶದಲ್ಲೂ ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಆದರೆ ತಲಾಕ್ ನೀಡಿರೋ ಕಾರಣ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ. ಬನ್ನಿ ಹೇಳ್ತೀವಿ

ಉತ್ತರ ಪ್ರದೇಶದಲ್ಲಿಯುವತಿಯೊಬ್ಬಳು ಈಗ ದೂರು ನೀಡಿದ್ದಾಳೆ. ತನ್ನ ಗಂಡ ಆಲಂ ತನ್ನ ಮೈ ಬಣ್ಣ ಕಪ್ಪಗಿದೆ ಅಂತಲೇ ತಲಾಕ್ ನೀಡಿದ್ದಾನೆ. ಈತನ ಮನೆಯವರೂ ಸಿಕ್ಕಾಪಟ್ಟೆ ಕಿರುಕುಳ ನೀಡಿದ್ದಾರೆ ಎಂದು ದೂರಿದ್ದಾಳೆ.

ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಇವರು ಖರೀದಿಸಿಗೆ 10 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಎನ್ನುತ್ತಿದ್ದರಂತೆ. ತಮ್ಮ ತಂದೆ ಗಂಡನ ಮನೆಯವರಿಗೆ 10 ಗುಂಟೆ ಜಮೀನನ್ನೂ ಕೊಟ್ಟಿದ್ದಾರೆ. ಆದರೂ ಕಿರುಕುಳ ಕೊಡುತ್ತಿದ್ದರು ಎಂದು ಗಂಡನ ಮನೆಯ 8 ಜನರ ವಿರುದ್ಧ ಈ ಯುವತಿ ದೂರು ನೀಡಿದ್ದಾಳೆ.

Edited By :
PublicNext

PublicNext

20/11/2021 05:36 pm

Cinque Terre

29.95 K

Cinque Terre

4

ಸಂಬಂಧಿತ ಸುದ್ದಿ