ಬೆಂಗಳೂರು : ಬಾಂಬೆ ರವಿ ಜೊತೆ ನಂಟುಹೊಂದಿದ್ದ ಕರ್ಚೀಫ್ ಪಳನಿ ನಿರ್ಮಾಪಕ ಉಮಾಪತಿ ಮತ್ತು ದೀಪಕ್ ಕೊಲೆಗೆ ಸುಫಾರಿ ಪಡೆದಿದ್ದ.
ಇನ್ನು ಪಳನಿ ದೀಪಕ್ ಮತ್ತು ಉಮಾಪತಿ ಕೊಲೆಗೆ ಹುಡುಗರನ್ನು ಸೆಟ್ ಕೂಡಾ ಮಾಡಿದ್ದ. ಕರಿಯಾ ರಾಜೇಶ್ ಜೊತೆ ಸೇರಿ ನಿರ್ಮಾಪಕರಿಗೆ ಸ್ಕೆಚ್ ಹಾಕಿದ್ದ ಪಳನಿ ಅಚಾನಕ್ಕಾಗಿ ಜಯನಗರ ಪೊಲೀಸರಿಗೆ ತಗಲಾಕಿಕೊಂಡಿದ್ದ. ಪಳನಿ ಹುಡುಗರು ಸದ್ಯ ಸುಫಾರಿ ನೀಡಿದ್ದ ಬಾಂಬೆ ರವಿ ಸಾಕಷ್ಟು ಕೇಸ್ ಗಳಲ್ಲಿ ತಲೆಮರೆಸಿಕೊಂಡಿದ್ದ ಪಳನಿ
ಇನ್ನು 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿರುವ ಕರ್ಚೀಫ್ ಪಳನಿ ಎಂಬ ರೌಡಿಯನ್ನು ಹಿಡಿಯಲು ಪೊಲೀಸರು ಕಾರ್ಯಾಚರಣೆಗೆ ಮುಂದಾದ ವೇಳೆ ಸಿಸಿಬಿ ಪೊಲೀಸರು ಪಳನಿಗೆ ಶರಣಾಗಲು ಸೂಚಿಸಿದ್ದಾರೆ.
ಸಿಸಿಬಿ ಎಸಿಪಿ ಪರಮೇಶ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಪೊಲೀಸರ ಮೇಲೆ ತಿರುಗಿ ಬಿದ್ದ ಪಳನಿ ಇನ್ಸ್ ಪೆಕ್ಟರ್ ಹರೀಶ್ ಕುಮಾರ್ ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಅವರ ಎಡ ಮೊಣಕೈಗೆ ಗಾಯಗಳಾಗಿವೆ. ತಕ್ಷಣ ಎಸಿಪಿ ಪಳನಿಯ ಮೇಲೆ ಗುಂಡು ಹಾರಿಸಿದ್ದು, ಆತನ ಎಡಗಾಲಿಗೆ ಗುಂಡು ತಗುಲಿ ಕೆಳಗೆ ಬಿದ್ದಿದ್ದಾನೆ.
ಸದ್ಯ ಪಳನಿಯನ್ನು ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಕೊಲೆ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾದ ನಂತರ ಈತ ತಲೆಮರೆಸಿಕೊಂಡಿದ್ದ.
PublicNext
18/11/2021 11:29 am