ಚಿತ್ರದುರ್ಗ: ಸಾವಿಗೂ ಮುನ್ನ ತನ್ನ ಕೈ ಕೊಯ್ದುಕೊಂಡು, ರಕ್ತದಿಂದ ಗೋಡೆ ಮೇಲೆ ‘ನನ್ನ ಸಾವಿಗೆ ಪೊಲೀಸರೇ ಕಾರಣ’ ಎಂದು ಬರೆದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಹೌದು ಚಿತ್ರದುರ್ಗ ತಾಲೂಕು ಭೀಮಸಮುದ್ರ ಬಳಿಯ ಬೊಮ್ಮೇನಹಳ್ಳಿ ಗ್ರಾಮದ ವೆಂಕಟೇಶ್(42) ಮೃತ. ಹಿರಿಯೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಹತ್ತಿರದಲ್ಲಿರುವ ಮಳಿಗೆಯೊಂದರಲ್ಲಿ ಪಂಚೆಯಿಂದ ನೇಣು ಬಿಗಿದುಕೊಂಡಿದ್ದಾನೆ.
ಸ್ಥಳಕ್ಕೆ ಎಸ್ಪಿ ಜಿ.ರಾಧಿಕಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಡೆ ಮೇಲೆ ‘ನನ್ನ ಸಾವಿಗೆ ಪೊಲೀಸರೇ ಕಾರಣ, ಮದುವೆ..’ ಇತ್ಯಾದಿ ಅಸ್ಪಷ್ಟ ಬರಹಗಳಿದ್ದು, ತನಿಖೆಗೆ ಎಫ್ ಎಸ್ ಎಲ್ ವಿಧಿ ವಿಜ್ಞಾನ ತಜ್ಞರನ್ನು ಕೋರಲಾಗಿದೆ. ಸಾವಿನ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.
PublicNext
16/11/2021 06:21 pm