ಕೊಪ್ಪಳ: ಜಿಲ್ಲಾ ಆಸ್ಪತ್ರೆಯ ಮುಂಭಾಗ ಭಿಕ್ಷೆ ಬೇಡುತ್ತಿದ್ದ ದಂಪತಿಗಳಾದ ಮಂಜುನಾಥ್,ಭದ್ರಮ್ಮ ತಮ್ಮ ಹೆಣ್ಣು ಮಗು ಸಾಕಲಾಗದೆ ಮಾರಾಟ ಮಾಡಿರುವ ಘಟನೆ ನಡೆದಿದೆ.
ಮೂವತ್ತು ಸಾವಿರ ಹಣಕ್ಕೆ ವಿಜಯನಗರದಲ್ಲಿ ಮಗು ಮಾರಾಟ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ದಂಪತಿ ಬಳಿ ಮೂವತ್ತು ಸಾವಿರ ಹಣ ಪತ್ತೆಯಾದಾಗ ಮಗು ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ.
ದಂಪತಿ ಬಳಿ ಈ ಬಗ್ಗೆ ವಿಚಾರಿಸಿದಾಗ ಮಗುವನ್ನು ವಿಜಯನಗರದ ನರ್ಸ್ ಬಳಿ ಬಿಟ್ಟು ಬಂದಿದ್ದೇವೆ ಎಂದು ಹೇಳುತ್ತಿದ್ದರು.ಅನುಮಾನ ಬಂದು ಮಕ್ಕಳ ಸಹಾಯವಾಣಿ,ಪೊಲೀಸರಿಗೆ ಸ್ಥಳೀಯರು ತಿಳಿಸಿದ್ದಾರೆ.
ನಿತ್ಯವೂ ಮಗುವಿನೊಂದಿಗೆ ಭದ್ರಮ್ಮ ಭಿಕ್ಷೆ ಬೇಡುತ್ತಿದ್ದರು ಸ್ಥಳೀಯರು ಮಗು ಎಲ್ಲಿ ಎಂದು ಕೇಳಿದಾಗ ,ಪತಿ ಮಾರಾಟ ಮಾಡಿದ್ದಾನೆಂದು ಹೇಳಿದ್ದಾಳೆ. ಪೊಲೀಸರು ಭಿಕ್ಷುಕ ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ.
PublicNext
14/11/2021 12:08 pm