ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಳೇ ಛಾಪಾಕಾಗದ ಮಾರಾಟ ಮಾಡ್ತಿದ್ದವರ ಮನೆ ಮೇಲೆ ದಾಳಿ

ಬೆಂಗಳೂರು: ಬೆಂಗಳೂರಿನ ಪೂರ್ವ ವಿಭಾಗದ ಪೊಲೀಸರು,ಡಿಸಿಪಿ ಶರಣಪ್ಪ,ಹಾಗೂ ಎಸಿಪಿ ಸಕ್ರಿ ನೇತೃತ್ವದಲ್ಲಿ ಹಳೆ ಛಾಪಾಕಾಗದ ಮಾರಾಟ ಮಾಡುತ್ತಿದ್ದ ಆರೋಪಿಗಳ ಮನೆ ಮೇಲೆ. ದಾಳಿ ನಡೆಸಿದ್ದಾರೆ,ದಾಳಿ ವೇಳೆ ಸಾವಿರಾರು ಛಾಪಾಕಾಗದ ಪತ್ತೆಯಾಗಿವೆ ಎನ್ನಲಾಗಿದೆ

ಹೈಕೋರ್ಟ್ ಸೂಚನೆ ನೀಡಿದ ಮೇರೆಗೆ ದಾಳಿ‌ ನಡೆಸಿರುವ ಪೊಲೀಸರು ,ಬ್ಯಾಟರಾಯನಪುರ, ಕೋರಮಂಗಲ ಸೇರಿ ನಾಲ್ಕು ಕಡೆ ದಾಳಿ ಮಾಡಿದ್ದಾರೆ,ಹಳೇ ಛಾಪಾಕಾಗದ ಬಳಸಿಕೊಂಡು ಸಾಕಷ್ಟು ಅಪರಾಧ ಕೃತ್ಯ ನಡೆಯುತ್ತಿದ್ದು ,ಮುಖ್ಯವಾಗಿ ಲಿಟಿಗೇಷನ್ ಸೈಟ್ ಗಳನ್ನ ಕಬ್ಜಾ ಮಾಡೋಕೆ ಈ ಖಾಗದ ಪತ್ರಗಳನ್ನ ಬಳಸಿಕೊಳ್ಳಲಾಗುತ್ತಿತ್ತು,

ದಾಳಿಯಲ್ಲಿ ಒಟ್ಟು ಐವರು ಛಾಪಾಕಾಗದ ಮಾರಾಟ ಮಾಡ್ತಿದ್ದ ಆರೋಪಿಗಳನ್ನ ವಶಕ್ಕೆ ಪಡೆದಿರುವ ಖಾಕಿ ಪಡೆ ತನಿಖೆ ಮುಂದುವರೆಸಿದೆ.

Edited By : Manjunath H D
PublicNext

PublicNext

13/11/2021 02:35 pm

Cinque Terre

37.93 K

Cinque Terre

0

ಸಂಬಂಧಿತ ಸುದ್ದಿ