ಬೆಂಗಳೂರು: ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಪ್ರಾಚೀನ ವಸ್ತುಗಳಾದ ಆನೆಯ ಕಾಲಿನ ಪಾದ, U-Boats West Ward ಪುಸ್ತಕ, ತಾಮ್ರದ ಪ್ಲೇಟ್, ಜರ್ಮನ್ ಸಿಲ್ವರ್ ಸೌಟು ಹಾಗೂ ಇತರೆ ವಸ್ತುಗಳನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನ ಬೆಂಗಳೂರು ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸದ್ಯ ಕಾಡುಗೊಂಡಹಳ್ಳಿ ಪೊಲೀಸರು ಆರೋಪಿ ವಶಕ್ಕೆ ಪಡೆದಿದ್ದು ಈತನ ಬಳಿ ಇದ್ದ ಆನೆ ಕಾಲಿನ ಪಾದ, ಆನೆಯ ದಂತದಿಂದ ಮಾಡಲ್ಪಟ್ಟ ಶೂ ರಿಮೂವರ್, ತಾಮ್ರದ ಪ್ಲೇಟ್. ಒಂದು ಮಿಲ್ಕ್ ಜಗ್, ಒಂದು ಟೀ ಪಾಟ್, ಸೇರಿದಂತೆ ಮುಂತಾದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿ ಆರ್ಯನ್ ಖಾನ್ ಎಂಬುವವನಾಗಿದ್ದು ತನ್ನ ಅಣ್ಣನ ಮಗನ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಸಲುವಾಗಿ ಮತ್ತು ತನ್ನ ಮನೆಯ ಬಾಡಿಗೆ ಕಟ್ಟುವ ಸಲುವಾಗಿ ಮಾಡಿಕೊಂಡಿರುವ ಸಾಲಗಳನ್ನು ತೀರಿಸಲು ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾನೆ.
ಸದ್ಯ ಪ್ರಕರಣ ಕುರಿತು ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಕಲಂ 51 (1ಎ) ಮತ್ತು ಕಲಂ 98 ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
PublicNext
13/11/2021 10:30 am