ಉತ್ತರಪ್ರದೇಶ: ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಇಚ್ಚಾರಾಮ್ ಯಾದವ್ ಲೈಂಗಿಕ ಶೋಷಣೆಯ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಗುತ್ತಿಗೆ ಕಾರ್ಮಿಕ ಮಹಿಳೆ ತನ್ನ ಮೇಲೆ ಕಾರ್ಯದರ್ಶಿ ಇಚ್ಚಾರಾಮ್ ಯಾದವ್ ನಡೆಸಿದ್ದ ಲೈಂಗಿಕ ಶೋಷಣೆಯಿಂದ ಬೇಸತ್ತು ಅದನ್ನ ಈಗ ವೀಡಿಯೋ ಮಾಡಿದ್ದಾರೆ. ಎಲ್ಲೆಡೆ ಅದನ್ನ ಶೇರ್ ಕೂಡ ಮಾಡಿದ್ದಾರೆ.
ಆದರೆ, ಈ ವೀಡಿಯೋ ಏನೋ ವೈರಲ್ ಆಗಿದೆ. ವೀಡಿಯೋ ನೋಡಿದವರೂ ಲೈಂಗಿಕ ಶೋಷಣೆಯನ್ನ ಕಣ್ಣಾರೆ ಕಾಣುತ್ತಾರೆ. ಆದರೆ, ಈ ಸಂಬಂಧ ಇಲ್ಲಿವರೆಗೂ ಎಫ್ ಐ ಆರ್ ದಾಖಲಾಗಿಲ್ಲ ಎನ್ನುವುದೇ ದುರಂತ.
ದೈನಿಕ ಭಾಸ್ಕರ್ ಪತ್ರಿಕೆಯ ಪತ್ರಕರ್ತ ಆದಿತ್ಯ ತಿವಾರಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯ ಲೈಂಗಿಕ ಶೋಷಣೆಯ ವೀಡಿಯೋವನ್ನ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ಇದನ್ನ ಕಂಡು ಬಹುತೇಕರು ಟ್ಯಾಗ್ ಕೂಡ ಮಾಡುತ್ತಿದ್ದಾರೆ.
PublicNext
11/11/2021 09:38 am