ಬೆಂಗಳೂರು: 14 ದಿನ ನ್ಯಾಯಾಂಗ ಬಂಧನದಲ್ಲಿದ್ದ ಬಿಟ್ ಕಾಯಿನ್ ಆರೋಪಿ ಹ್ಯಾಕರ್ ಶ್ರೀಕಿ ಅಲಿಯಾಸ ಕೃಷ್ಣ ಇವತ್ತು ಪರಪ್ಪನ ಅಗ್ರಹಾರದಿಂದ ಬಿಡುಗಡೆ ಆಗಿದ್ದಾನೆ.
2.50 ಸುಮಾರಿಗೆ ಪರಪ್ಪನ ಅಗ್ರಹಾರದಿಂದ ರಿಲೀಸ್ ಆದ ಶ್ರೀಕಿ,ನಾನೇನು ಮಾಡಿಯೇ ಇಲ್ಲ.ನನಗೆ ಯಾರೂ ಜಾಮೀನು ಕೊಟ್ಟರೂ ಅಂತಲೂ ಗೊತ್ತಿಲ್ಲ. ನನಗೇನೂ ಗೊತ್ತಿಲ್ಲ ಅಂತಲೂ ಹೇಳಿದ್ದಾನೆ.
ನನ್ನ ತಂದೆ ಆಸ್ಪತ್ರೆಯಲ್ಲಿದ್ದಾರೆ. ಅವರನ್ನ ನೋಡಲು ಹೋಗಬೇಕು.ಅದಕ್ಕೆ ನಾನು ಈಗ ಹೆಬ್ಬಾಳಕ್ಕೆ ಹೋಗುತ್ತಿದ್ದೇನೆ. ನಾನು ಏನೂ ಮಾಡಿಲ್ಲ ಅಂತ ಮತ್ತೆ ಮತ್ತೆ ಹೇಳಿ ಅಟೋ ಹತ್ತಿ ಹೋಗಿದ್ದಾನೆ ಶ್ರೀಕಿ.
ಎಲ್ಲವನ್ನೂ ಮಾಧ್ಯಮದವರೇ ಸೃಷ್ಟಿಮಾಡಿದ್ದಾರೆ. ನನಗೆ ಏನೂ ಗೊತ್ತಿಲ್ಲ.ಪೊಲೀಸರು ಹಣ ಸೀಜ್ ಮಾಡಿರೋದು ಸುಳ್ಳು.ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿದ ಮಾಧ್ಯಮದ ಪ್ರಶ್ನೆಗೂ ಉತ್ತರಿಸದೇನೇ, ನನಗೆ ಏನೂ ಗೊತ್ತೇ ಇಲ್ಲ ಎನ್ನುತ್ತಲೇ ಶ್ರೀ ಇಲ್ಲಿಂದ ಹೊರಟು ಹೋಗಿದ್ದಾನೆ.
PublicNext
10/11/2021 05:39 pm