ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಅಪಾರ್ಟ್ ಮೆಂಟ್ ಹೂಡಿಕೆದಾರನ ಹತ್ಯೆ ಮಾಡಿದ ನೇಪಾಳಿ ಸೆಕ್ಯೂರಿಟಿ ಗಾರ್ಡ್ ಬಂಧನ

ವರದಿ: ಮಲ್ಲಿಕ್ ಬೆಳಗಲಿ

ಬೆಂಗಳೂರಿನ ಎಚ್.ಎ.ಎಲ್. ಠಾಣಾ ವ್ಯಾಪ್ತಿಯ ಎಇಸಿಎಸ್ ಲೇಔಟಿನ ಅಪಾರ್ಟ್ ಮೆಂಟ್ ಶೇರ್ ಹೋಲ್ಡರ್ ನಿವಾಸಿಯನ್ನ ನೇಪಾಳಿ ಮೂಲದ ಸೆಕ್ಯೂರಿಟಿ ಗಾರ್ಡ್ ಹತ್ಯೆ ಮಾಡಿದ ಘಟನೆ ಜರುಗಿದೆ.

ನೇಪಾಳ ಮೂಲದ ಆರೋಪಿ ಬಸಂತ್ ಅತಿಯಾದ ಮದ್ಯಪಾನ ಮಾಡಿ ಸೆಕ್ಯುರಿಟಿ ಕೆಲಸಕ್ಕೆ ಬರುತ್ತಿದ್ದನೆನ್ನಲಾಗಿದ್ದು, ಇದಕ್ಕೆ ಕೊಲೆಯಾದ ಭಾಸ್ಕರ್ ರೆಡ್ಡಿ ವಿರೋಧ ವ್ಯಕ್ತಪಡಿಸುತ್ತಿದ್ದರೆನ್ನಲಾಗಿದೆ. ಇದರಿಂದ ಕೋಪಗೊಂಡು ಭಾಸ್ಕರ್ ರೆಡ್ಡಿ ಮನೆಗೆ ನುಗ್ಗಿದ್ದ ಆರೋಪಿ ಬಸಂತ್ ಚಾಕುವಿನಿಂದ ಇರಿದು ಭಾಸ್ಕರ್ ರೆಡ್ಡಿಯನ್ನು ಹತ್ಯೆ ಮಾಡಿದ್ದಾನೆ.

ಸದ್ಯ ಎಚ್.ಎ.ಎಲ್. ಪೊಲೀಸರು ಆರೋಪಿ ಬಸಂತ್ ನನ್ನು ಬಂಧಿಸಿದ್ದು,ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ

Edited By : Shivu K
PublicNext

PublicNext

10/11/2021 04:16 pm

Cinque Terre

38.3 K

Cinque Terre

1