ಚಂಡೀಗಡ: ಡ್ರಗ್ಸ್ ಖರೀದಿಸಲು ಹಣ ನೀಡಲಿಲ್ಲವೆಂದು 35 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿಯನ್ನೇ ಕೊಲೆ ಮಾಡಿದ ಘಟನೆ ಪಂಜಾಬ್‌ನ ಲುಧಿಯಾನ ಜಿಲ್ಲೆಯ ಸಮ್ರಾಲಾದ ಪುನಿಯಾ ಗ್ರಾಮದಲ್ಲಿ ನಡೆದಿದೆ.
ಭಿಂದರ್ ಕೌರ್ (60) ಕೊಲೆಯಾದ ತಾಯಿ. ಹಿರಿಯ ಪುತ್ರ ಜಗಜೀವನ್ ಸಿಂಗ್ ಅಲಿಯಾಸ್ ಜಗ್ಗಿ (35) ಕೊಲೆಗೈದ ಆರೋಪಿ. ಕೊಲೆಯ ನಂತರ ಆರೋಪಿಯು ತಾಯಿಯ ಶವವನ್ನು ಮನೆಯಲ್ಲಿ ಇಟ್ಟು ಪರಾರಿಯಾಗಿದ್ದಾನೆ. ಸೋಮವಾರ ಬೆಳಗ್ಗೆ ಗ್ರಾಮಸ್ಥರು ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಭಿಂದರ್ ಕೌರ್ ಅವರ ಕಿರಿಯ ಪುತ್ರ ದಲ್ಬೀರ್ ಸಿಂಗ್ ಹೇಳಿಕೆಯನ್ನು ಅನುಸರಿಸಿ ಪೊಲೀಸರು ಜಗಜೀವನ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ತನಿಖೆ ಆರಂಭಿಸಿರುವ ಪೊಲೀಸರು ಆರೋಪಿ ಜಗ್ಗಿಗೆ ಬಲೆ ಬೀಸಿದ್ದಾರೆ.
PublicNext
09/11/2021 04:51 pm