ರಾಯ್ಪುರ : ಸಿಆರ್ ಪಿಎಫ್ ಸಿಬ್ಬಂದಿ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದೆ. ಈ ವೇಳೆ ಜವಾನನೊಬ್ಬ ತನ್ನ ಸಹ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಛತ್ತೀಸ್ ಗಢದ ಸುಕ್ಮಾದಲ್ಲಿ ನಡೆದಿದೆ.ಇನ್ನು ಈ ಗುಂಡಿನ ದಾಳಿಯಲ್ಲಿ 4 ಯೋಧರು ಸಾವನ್ನಪ್ಪಿದ್ದು, 3 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡು ಹಾರಿಸಿದ ಯೋಧನ ಹೆಸರು ರಿತೇಶ್ ರಂಜನ್ ಎಂದು ಹೇಳಲಾಗಿದ್ದು, ಗಾಯಗೊಂಡವರನ್ನು ಧನಂಜಯ್ ಕುಮಾರ್ ಸಿಂಗ್, ರಾಜೀವ್ ಮಂಡಲ್, ಧರ್ಮಾತ್ಮ ಕುಮಾರ್ ಮತ್ತು ಮಲಯ್ ರಂಜನ್ ಮಹಾರಾಣಾ ಎಂದು ಗುರುತಿಸಲಾಗಿದೆ. ಇನ್ನು ಗಾಯಗೊಂಡ ಯೋಧರನ್ನು ರಾಯ್ ಪುರಕ್ಕೆ ವಿಮಾನ ಮೂಲಕ ಕರೆತರಲಾಗುತ್ತಿದೆ. ಘಟನೆಯಲ್ಲಿ ಹುತಾತ್ಮರಾದ ಯೋಧರ ಹೆಸರನ್ನು ಧಂಜಿ, ರಾಜೀಬ್ ಮಂಡಲ್, ಧರ್ಮೇಂದ್ರ ಕುಮಾರ್ ಮತ್ತು ರಾಜಮಣಿ ಕುಮಾರ್ ಯಾದವ್ ಎಂದು ಹೇಳಲಾಗಿದೆ.
ಇನ್ನು ಗುಂಡಿನ ದಾಳಿ ನಡೆಸಿದ ಆರೋಪಿ ಜವಾನ ರಿತೇಶ್ ರಂಜನ್ ಗೆ ಏನಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆರಂಭಿಕ ಮಾಹಿತಿಯಲ್ಲಿ ಸೈನಿಕರ ನಡುವಿನ ವಾಗ್ವಾದ ನಡೆದಿತ್ತೆಂಬ ವಿಷಯ ಬಯಲಿಗೆ ಬಂದಿದೆ. ಈ ಕುರಿತು ಸಿಆರ್ ಪಿಎಫ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
PublicNext
08/11/2021 12:00 pm