ಮೈಸೂರು: ಹೇ ಮನಸೇ ನೀನೇಕೆ ಇಷ್ಟೊಂದು ದುರ್ಬಲವಾಗುತ್ತಿದ್ದಿ?... ಇತ್ತೀಚೆಗೆ ಯುವ ಜನತೆ ಆತ್ಮಹತ್ಯೆ ದಾರಿ ಹಿಡಿಯುತ್ತಿರುವುದು ನಿಜಕ್ಕೂ ಖೇಧಕರ ಸಂಗತಿ.ಸದ್ಯ ಪರೀಕ್ಷೆ ಒತ್ತಡದಿಂದ ಬೇಸತ್ತ ಪಿಎಚ್ ಡಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದಿದೆ.
ಚಾಮರಾಜನಗರ ಮೂಲದ ರಶ್ಮಿ (29) ಮೃತ ದುರ್ದೈವಿ. ಎಂಎಸ್ಸಿ ರಸಾಯನಶಾಸ್ತ್ರ ಮುಗಿಸಿ ಪಿಎಚ್ ಡಿ ಮಾಡುತ್ತಿದ್ದ ರಶ್ಮಿ, ಪರೀಕ್ಷೆ ಒತ್ತಡದಿಂದ ಬೇಸತ್ತು ಕುಣಿಕೆಗೆ ಕೊರಳೊಡ್ಡಿದ್ದಾರೆ.
ಹೌದು ಸರಸ್ವತಿಪುರಂದಲ್ಲಿ ಪಿಜಿಯಲ್ಲಿ ಉಳಿದುಕೊಂಡಿದ್ದ ರಶ್ಮಿ, ಜೆಎಸ್ ಎಸ್ ನಲ್ಲಿ ಪಾರ್ಟ್ ಟೈಂ ಲೆಕ್ಚರರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ರಸಾಯನಶಾಸ್ತ್ರ ವಿಚಾರದಲ್ಲಿ ಪಿಎಚ್ ಡಿ ಮಾಡುತ್ತಿದ್ದ ರಶ್ಮಿ ಪರೀಕ್ಷೆಗೆ ಸಿದ್ಧತೆ ಮಾಡಿ ಕೊಂಡಿರಲಿಲ್ಲವೆಂದು ಹೇಳಲಾಗಿದೆ. ಇದರಿಂದ ಒತ್ತಡಕ್ಕೆ ಒಳಗಾಗಿದ್ದ ರಶ್ಮಿ ಪಿಜಿಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
06/11/2021 06:51 pm