ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿಎಸ್ ಪುರದಲ್ಲಿ ಪಿಎಸ್ ಐ ಸೋಮಶೇಖರ್ ಮತ್ತು ಮುಖ್ಯಪೇದೆ ನಯಾಜ್ ಅಹಮದ್ ಲಂಚ ಪಡೆಯುವಾಗಲೇ ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಬಿದ್ದಿದ್ದಾರೆ.
ಈ ವೇಳೆ ಗುಬ್ಬಿ ತಾಲ್ಲೂಕು ಚಂದ್ರಶೇಖರಪುರ (ಸಿ.ಎಸ್.ಪುರ) ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಸೋಮಶೇಖರ್ ಠಾಣೆಯಿಂದ ಓಡಿ ಹೋಗಿದ್ದಾರೆ. ಠಾಣೆಯಿಂದ ಓಡಿ ಹೋಗುತ್ತಿದ್ದ ಅವರನ್ನು ಹಿಡಿಯಲು ಸಾರ್ವಜನಿಕರು ಬೆನ್ನಟ್ಟಿದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.
ಕೌಟುಂಬಿಕ ಕಲಹ ವಿಚಾರಕ್ಕೆ 28 ಸಾವಿರ ಬೇಡಿಕೆ ಇಟ್ಟಿದ್ದ ಪಿಎಸ್ ಐ ಚಂದ್ರಣ್ಣ ಎಂಬುವವರಿಂದ ಹಣ ಪಡೆಯುವಾಗ ಎಸಿಬಿಗೆ ಸಿಕ್ಕಿ ಬಿದ್ದಿದ್ದಾರೆ. ಮುಂಗಡವಾಗಿ 12 ಸಾವಿರ ಹಣ ಪಡೆದಿದ್ದ ಅಧಿಕಾರಿಗಳು ಇಂದು ಬಾಕಿ 16 ಸಾವಿರ ಪಡೆಯುವಾಗ ಎಸಿಬಿ ದಾಳಿ ನಡೆಸಿದೆ.
PublicNext
03/11/2021 05:28 pm