ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಕಿಂಗ್ ವರದಿ: ದೇಶದಲ್ಲಿ ಆತ್ಮಹತ್ಯೆ ಪ್ರಮಾಣ ಭಾರೀ ಹೆಚ್ಚಳ.!

ನವದೆಹಲಿ: ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ 2020ರಲ್ಲಿ ಶೇ.10ರಷ್ಟು ಹೆಚ್ಚಾಗಿದೆ. ಇತ್ತೀಚಿನ ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, 2020ರಲ್ಲಿ ಭಾರತದಲ್ಲಿ 1,53,052 ಆತ್ಮಹತ್ಯೆಗಳನ್ನು ದಾಖಲಾಗಿವೆ. ಅಂದ್ರೆ ದೈನಂದಿನ ಸರಾಸರಿ ಪ್ರಕಾರ 418 ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಕೋವಿಡ್‌ ಸೋಂಕಿನಿಂದ ಉಂಟಾಗಿರುವ ವಿವಿಧ ರೀತಿಯ ಆಘಾತಗಳಿಂದಾಗಿ ಒಟ್ಟು 1.53 ಲಕ್ಷ ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಕೇಂದ್ರ (ಎನ್‌ಸಿಆರ್‌ಬಿ)ದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಅಂಶ 1967ರ ಬಳಿಕದ ಗರಿಷ್ಠ ದಾಖಲೆಯಾಗಿದೆ. ಈ ಪೈಕಿ ಕರ್ನಾಟಕದಲ್ಲಿ 12,259 ಮಂದಿ ಜೀವ ಕಳೆದುಕೊಂಡಿದ್ದಾರೆ ಎನ್ನುವುದು ಗಮನಾರ್ಹ.

ಮಹಾರಾಷ್ಟ್ರದಲ್ಲಿ 19,909 ಜನ, ತಮಿಳುನಾಡಿನಲ್ಲಿ 16,883 ಜನ, ಮಧ್ಯಪ್ರದೇಶದಲ್ಲಿ 14,578, ಪಶ್ಚಿಮ ಬಂಗಾಳದಲ್ಲಿ 13,103 ಮಂದಿ ಹಾಗೂ ಕರ್ನಾಟಕದಲ್ಲಿ 12,259 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಐದು ರಾಜ್ಯಗಳಲ್ಲಿಯೇ ಶೇ.50.1 ಪ್ರಕರಣಗಳು ದೃಢಪಟ್ಟಿವೆ.

Edited By : Vijay Kumar
PublicNext

PublicNext

30/10/2021 08:41 am

Cinque Terre

65.89 K

Cinque Terre

20

ಸಂಬಂಧಿತ ಸುದ್ದಿ