ಬೆಂಗಳೂರು: ಮಾಡಿದ್ದುಣ್ಣೋ ಮಾರಾಯ ಎನ್ನುವಂತೆ ನಾವು ಮಾಡಿದ ಪಾಪ ಪುಣ್ಯಗಳು ನಮ್ಮ ಸುತ್ತಲೇ ಇರುತ್ತವೆ ಎನ್ನುವುದಕ್ಕೆ ಈ ರೌಡಿ ಶೀಟರ್ ಹತ್ಯೆ ಒಂದು ಉದಾಹರಣೆಯಾಗಿದೆ. ಹೌದು ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ಕೊಲೆ ಮಾಡಿ ಜೈಲು ಸೇರಿದ್ದ ರೌಡಿ ಶೀಟರ್ ತನ್ನ 36ನೇ ವಯಸ್ಸಿನಲ್ಲೇ ಕೊಲೆಯಾಗಿ ಹೋಗಿದ್ದಾನೆ.
ಬೆಂಗಳೂರಿನಲ್ಲಿ ಕೊಲೆಯಾದ ರೌಡಿಶೀಟರ್ ಜೆ.ಸಿ.ಆನಂದ್ ಎಂಬಾತನ ಪಾಪಕೂಪದ ಕಿರುಪರಿಚಯವಿದು.ಪೀಣ್ಯ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಆನಂದ್ ನೆಲಗದರನಹಳ್ಳಿಯ ಶಿವಪುರ ಬಳಿ ಕೊಲೆಗೀಡಾಗಿದ್ದಾನೆ. ಬೈಕ್ ನಲ್ಲಿ ಬಂದ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಜೆ.ಸಿ. ಆನಂದ್ ತನ್ನ 18ನೇ ವಯಸ್ಸಿನಲ್ಲಿ ಅಪ್ಪಿ ಎಂಬಾತನನ್ನು ಕೊಲೆ ಮಾಡಿ, ಜೈಲುಪಾಲಾಗಿದ್ದ. ಬಳಿಕ ಜೈಲಿಂದ ಹೊರಬಂದಿದ್ದ ಇತ್ತಿಚೆಗೆ ಮತ್ತೆ ಅಪಹರಣ ಪ್ರಕರಣವೊಂದರಲ್ಲಿ ದಿನಗಳ ಹಿಂದೆ ಜೈಲುಪಾಲಾಗಿ ಮೂರು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದ.
ಪರಿಚಿತರೇ ಹಳೇ ದ್ವೇಷದಿಂದ ಈ ಕೊಲೆ ಮಾಡಿರಬಹುದು ಎಂದು ಅಂದಾಜಿಸಲಾಗಿದ್ದು, ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ವಿನಾಯಕ ವಸಂತ್ ರಾವ್ ಪಾಟೀಲ್, ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
PublicNext
25/10/2021 02:09 pm