ಲಕ್ನೋ: ಆನ್‌ಲೈನ್ ಸೆಕ್ಸ್ ರಾಕೆಟ್ ಪ್ರಕರಣದ ಸಂಬಂಧ ನಾಲ್ವರು ಮಹಿಳೆಯರು ಮತ್ತು ಓರ್ವ ಪುರುಷನನ್ನು ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು 'ಸ್ಟ್ರಿಪ್ ಚಾಟ್' ಎಂಬ ಹೆಸರಿನ ಆನ್‌ಲೈನ್ ಫ್ಲಾಟ್ ಫಾರ್ಮ್‌ನಲ್ಲಿ ಅಶ್ಲೀಲ ಚಿತ್ರ ಪ್ರದರ್ಶನ ಮಾಡುತ್ತಿದ್ದರು. ಮೊದಲು ಮೆಂಬರ್ ಶಿಪ್ ಮಾಡಿಕೊಳ್ಳುತ್ತಿದ್ದ ವ್ಯಕ್ತಿಗಳಿಗೆ ಅಶ್ಲೀಲ ಚಿತ್ರಗಳನ್ನು ತೋರಿಸುತ್ತಿದ್ದರು. ನೋಂದಣಿ ಮಾಡಿಕೊಂಡಿಗೆ ಬೆತ್ತಲೆ ವಿಡಿಯೋಗಳನ್ನು ಕಳಿಸಿ, ಲೈವ್‌ನಲ್ಲಿ ತೋರಿಸಿದ್ದರು. ಬಳಿಕ ವಿಡಿಯೋ ನೋಡುವುದನ್ನು ರೆಕಾರ್ಡ್ ಮಾಡಿಕೊಂಡು ಅವರನ್ನು ಬ್ಲಾಕ್ ಮೇಲ್ ಮಾಡಲು ಆರಂಭಿಸುತ್ತಿದ್ದರು.
ಈ ವಂಚಕರ ಜಾಲಕ್ಕೆ ಸಿಲುಕಿ ರಾಜ್‌ಕೋಟ್‌ನ ವ್ಯಕ್ತಿಯೊಬ್ಬ 80 ಲಕ್ಷ ರೂ. ಕಳೆದುಕೊಂಡಿದ್ದ. ಸೈಬರ್ ದಳ ಮತ್ತು ನಂದಗ್ರಾಮ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ ಪರಿಣಾಮ ವಂಚಕರು ಸಿಕ್ಕಿಬಿದ್ದಿದ್ದಾರೆ. ವಂಚಕರ ತಾಣದ ಮೇಲೆ ದಾಳಿ ಮಾಡಿದಾಗ ಸೆಕ್ಸ್ ಟಾಯ್ಸ್, ಮಹಿಳೆಯರ ಒಳುಡುಪುಗಳು, ಮೊಬೈಲ್ ಪೋನ್ ಮತ್ತು ಲ್ಯಾಪ್ ಟಾಪ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಗಳಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಸೀಝ್ ಮಾಡಲಾಗಿದೆ. ಎಂಟು ಬ್ಯಾಂಕ್ ಖಾತೆಗಳಿಂದ ವಹಿವಾಟು ಆದ ಮೊತ್ತ ಬರೋಬ್ಬರಿ 3 ಕೋಟಿ 80 ಲಕ್ಷ ರೂ. ಸೀಜ್ ಮಾಡಲಾಗಿದೆ. ಇನ್ನು ಕೆಲ ಬ್ಯಾಂಕ್ ಖಾತೆಗಳು ಇದೇ ಪ್ರಕರಣಕ್ಕೆ ಲಿಂಕ್ ಆಗಿದ್ದು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
PublicNext
24/10/2021 08:35 am