ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೈ ಡೋಸ್ ಇಂಜೆಕ್ಷನ್ ಚುಚ್ಚಿ ಪತ್ನಿ ಕೊಂದ ವೈದ್ಯ ಪತಿ

ದಾವಣಗೆರೆ: ಒಂಬತ್ತು ತಿಂಗಳ ಹಿಂದೆ ವಾಮಾಚಾರಕ್ಕೆ ತನ್ನ ಪತ್ನಿಯನ್ನೇ ಕೊಲೆ ಮಾಡಿದ್ದ ವೈದ್ಯನೊಬ್ಬ ಬಲೆಗೆ ಬಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹೈ ಪ್ರೊಫೈಲ್ ಕೇಸ್ ಬಯಲಿಗೆಳೆಯುವಲ್ಲಿ ಹೊನ್ನಾಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದ ವೈದ್ಯ ಡಾ. ಚನ್ನೇಶಪ್ಪ ಕೊಲೆ ಮಾಡಿ ಪೊಲೀಸರ ಅತಿಥಿಯಾದ ಭೂಪ. ಹಾವೇರಿ ಜಿಲ್ಲೆಯ ಹಿರೇಕೆರೂರಿನ ಶಿಲ್ಪಾ ಹತ್ಯೆಗೀಡಾಗಿದ್ದಾಕೆ.

ಕಳೆದ 18 ವರ್ಷಗಳ ಹಿಂದೆ ಚನ್ನೇಶಪ್ಪ ಹಾಗೂ ಶಿಲ್ಪಾಳ ಮದುವೆಯಾಗಿತ್ತು. ನ್ಯಾಮತಿ ತಾಲೂಕಿನ ಬೆಳಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿ ಕೆಲಸ ಮಾಡುವಾಗ ಹಿರೆಕೇರೂರಿನ ಚಂದ್ರಪ್ಪ ತನ್ನ ಮಗಳು ಶಿಲ್ಪಾಳನ್ನು ಕೊಟ್ಟು ಮದುವೆ ಮಾಡಿಸಿದ್ದರು. ಈ ವೇಳೆ ಬರೋಬ್ಬರಿ 700 ಗ್ರಾಂ ಬಂಗಾರ, 1 ಕೆ ಜಿ ಬೆಳ್ಳಿ, 7 ಲಕ್ಷ ಕ್ಯಾಶ್, ವರದಕ್ಷಿಣೆ ನೀಡಿ ಮದುವೆ ಮಾಡಿಕೊಟ್ಟಿದ್ದರು.

ನಿಧಿ ಆಸೆಗೆ ಪತ್ನಿಯನ್ನ ಹೈಡೋಸ್ ಇಂಜೆಕ್ಷನ್ ನೀಡಿ ಕೊಲೆ ಮಾಡಿದ ಪತಿಯ ಕರಾಮತ್ತು 9 ತಿಂಗಳ ನಂತರ ಬಯಲಾಗಿದೆ.

9 ತಿಂಗಳ ಹಿಂದೆ ಅಂದ್ರೆ ಫೆಬ್ರವರಿ 11 ರಂದು ಆರೋಪಿ ಪತಿಯು ಶಿಲ್ಪಾಗೆ ಹೈ ಡೋಸ್ ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದ. ಎಫ್ ಎಸ್ ಎಲ್ ವರದಿಯ ನಂತರ ಕೊಲೆ ಪ್ರಕರಣ ಬಯಲಾಗಿದೆ. ಹೈಡೋಸ್ ಇಂಜೆಕ್ಷನ್ ನೀಡಿ ಪತ್ನಿಯನ್ನ ಕೊಲೆ ಮಾಡಿರುವುದಾಗಿ ಪತಿ ಒಪ್ಪಿಕೊಂಡಿದ್ದಾನೆ.

ಘಟನೆ ಹಿನ್ನೆಲೆ ಏನು..?

2011 ರ ಫೆ. 11ರಂದು ರಂದು ಪತ್ನಿ ಶಿಲ್ಪಾಗೆ ಹೈಡೋಸ್ ಇಂಜೆಕ್ಷನ್ ಅನ್ನು ಪತಿ ಚನ್ನೇಶಪ್ಪ ನೀಡಿದ್ದ. ನಂತರ ಶಿಲ್ಪಾ ತಂದೆ ತಾಯಿಗೆ ನಿಮ್ಮ ಮಗಳು ಬಿಪಿ ಲೋ ಆಗಿದೆ ಆಸ್ಪತ್ರೆಗೆ ಹೋಗುತಿದ್ದೇನೆ ಅಂತ ಮಾಹಿತಿ ನೀಡಿದ್ದ. ನಂತರ ನಿಮ್ಮ ಮಗಳು ತೀರಿ ಹೋಗಿದ್ದಾಳೆ ಅಂತ ಪತಿ ಚನ್ನೇಶಪ್ಪ ಮಾಹಿತಿ ನೀಡಿದ್ದ. ಶಿಲ್ಪಾ ತಂದೆ ತಾಯಿ ಬಂದು ನೋಡಿದಾಗ ಭುಜಕ್ಕೆ ಸೂಜಿ ಚುಚ್ಚಿದ ಹಾಗೆ ಗಾಯ ಆಗಿತ್ತು. ಆಗ ಇದರಿಂದ ಅನುಮಾನಗೊಂಡು ನ್ಯಾಮತಿ ಪೊಲೀಸರಿಗೆ ದೂರು ಕೊಡಲಾಗಿತ್ತು.

ದೂರಿನ ನಂತರ ಶವವನ್ನ ಮರಣೋತ್ತರ ಪರೀಕ್ಷೆ ನಡೆಸುವಂತೆ ಮೃತಳ ಪೋಷಕರು ಆಗ್ರಹಿಸಿದ್ದರು.

ಮರಣೋತ್ತರ ಪರೀಕ್ಷೆ- ಎಫ್ ಎಸ್ ಎಲ್ ವರದಿಯ ನಂತರ ಹೈ ಡೋಸ್ ಇಂಜೆಕ್ಷನ್ ನಿಂದ ಶಿಲ್ಪಾ ಸಾವನ್ನಪ್ಪಿರುವುದು ಗೊತ್ತಾಗಿದೆ.

ವರದಿಯ ನಂತರ ಆರೋಪಿ ಚನ್ನೇಶನನ್ನ ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಚನ್ನೇಶಪ್ಪ ನಿಧಿಗಾಗಿ ರಾತ್ರೋ ರಾತ್ರಿ ಮನೆಯಲ್ಲಿ ಪೂಜೆ ಮಾಡಿಸುತ್ತಿದ್ದ. ಕೆಲ ಪೂಜಾರಿಗಳು ನಿಧಿಗಾಗಿ ಬಲಿ ಬೇಕಾಗಿರೋ ಬಗ್ಗೆ ಹೇಳಿದ್ದರು. ಇದೇ ವಿಚಾರವಾಗಿ ಮಗಳನ್ನ ಕೊಲೆ ಮಾಡಿದ್ದಾರೆ ಅಂತ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಚನ್ನೇಶಪ್ಪನಿಗೆ 40 ಎಕರೆ ಜಮೀನು ಇತ್ತು. ಶ್ರೀಮಂತನಾದ ಚನ್ನೇಶ್, ಕುಡಿತ, ಕ್ಯಾಸಿನೋ ಚಟ, ಜೂಜಾಡದ ಗೀಳು ಅಂಟಿಸಿಕೊಂಡಿದ್ದ. ಇದೇ ವಿಚಾರಕ್ಕೆ ಪತ್ನಿಗೆ ಹಣ ತರುವಂತೆಯು ಪೀಡಿಸುತ್ತಿದ್ದ ಎನ್ನಲಾಗಿದೆ. ನಂತರ ಕೆಲವರ ಮಾತು ಕೇಳಿ ನಿಧಿ ಆಸೆಗೆ ಪತ್ನಿಯ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Edited By : Nirmala Aralikatti
PublicNext

PublicNext

23/10/2021 07:51 pm

Cinque Terre

44.48 K

Cinque Terre

4

ಸಂಬಂಧಿತ ಸುದ್ದಿ