ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಶ್ರೀನಗರದಲ್ಲಿ ಜೋಡಿ ಕೊಲೆಯಾಗಿದೆ. ವ್ಯಕ್ತಿಯೋರ್ವ ತನ್ನ ತಂದೆ ಹಾಗೂ ತಂದೆಯ ಪ್ರೇಯಸಿಯನ್ನು ಬರ್ಬರವಾಗಿ ಕೊಲೆಗೈದಿದ್ದಾನೆ.
ಕೆ.ಜಿ ಕೊಪ್ಪಲು ನಿವಾಸಿ ಶಿವಪ್ರಕಾಶ್ (56) ಮತ್ತು ಶ್ರೀನಗರದ ನಿವಾಸಿ ಲತಾ (48) ಕೊಲೆಯಾದವರು. ಹತ್ಯೆಗೈದ ಆರೋಪಿ ಸಾಗರ್ ನಾಪತ್ತೆಯಾಗಿದ್ದಾನೆ. ಶ್ರೀನಗರದಲ್ಲಿರುವ ಲತಾ ಮನೆಗೆ ನುಗ್ಗಿದ್ದ ಸಾಗರ್ ಮಚ್ಚಿನಿಂದ ದಾಳಿ ನಡೆದಿದ್ದಾನೆ. ಮೊದಲು ತಂದೆಯನ್ನು ಕೊಲೆ ಮಾಡಿದ ಸಾಗರ್ ನಂತರ ಲತಾಳಿಗೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾನೆ.
ಲತಾ ಮೇಲೆ ಹಲ್ಲೆಗೆ ನಡೆಸುವಾಗ ಲತಾ ಪುತ್ರ ನಾಗಾರ್ಜುನ ತಡೆಯಲು ಬಂದಿದ್ದಾರೆ. ಈ ವೇಳೆ ಸಾಗರ್ ನಾಗರ್ಜುನ ಮೇಲೆಯೂ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಸಾಗರ್ ಅಲ್ಲಿಂದ ಪರಾರಿಯಾಗಿದ್ದಾನೆ. ಗಾಯಗೊಂಡಿರುವ ನಾಗಾರ್ಜುನನನ್ನು ಆಸ್ಪತ್ರೆ ದಾಖಲು ಮಾಡಲಾಗಿದೆ. ಈ ಸಂಬಂಧ ದಕ್ಷಿಣ ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಾಗರ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
PublicNext
22/10/2021 09:47 am