ಅಫ್ಘಾನಿಸ್ತಾನ್:ತಾಲಿಬಾನಿಗಳ ಕ್ರೌರ್ಯಕ್ಕೆ ಕೊನೆನೇ ಇಲ್ಲ ಬಿಡಿ. ಇಲ್ಲಿಯ ಮಹಿಳೆಯರು ಇದಕ್ಕೆ ಅತಿ ಹೆಚ್ಚು ತುತ್ತಾಗಿದ್ದಾರೆ. ಅಫ್ಗಾನಿಸ್ತಾನದ ಮಹಿಳಾ ವಾಲಿಬಾಲ್ ಆಟಗಾರ್ತಿಯ ಶಿರಚ್ಛೇದನ ಮಾಡಿ ಕೌರ್ಯತೆ ಮೆರೆದಿದ್ದಾರೆ ತಾಲಿಬಾನಿಗಳು. ಆದರೆ ಇದು ಈಗ ಬೆಳಕಿಗೆ ಬಂದಿದೆ.
ತಾಲಿಬಾನಿಗಳ ಅಟ್ಟಹಾಸವನ್ನ ತಡೆಯೋರು ಯಾರು ಇಲ್ಲ ಅನಿಸುತ್ತದೆ. ಮಹಿಳಾ ವಾಲಿಬಾಲ್ ಆಟಗಾರ್ತಿ ಮಹ್ ಜಬೀನ್ ಹಖೀಮಿ ಹೆಸರಿನ ಆಟಗಾರ್ತಿ ಪ್ರಾಣಕಳೆದುಕೊಂಡು ಬಹಳ ದಿನಗಳೇ ಉರುಳು ಹೋಗಿವೆ. ಪುತ್ರಿ ಕ್ರೂರವಾಗಿ ಕೊಲೆಯಾಗಿದ್ದಾಳೆ ಅನ್ನೋ ವಿಷಯ ಮನೆಯವರಿಗೆಲ್ಲ ಗೊತ್ತಿದೆ. ತಾಲಿಬಾನಿಗಳು ತಾಕೀತು ಮಾಡಿದ್ದಾರೆ. ಎಲ್ಲೂ ಬಾಯಿ ಬಿಡೋ ಹಾಗಿಲ್ಲ ಅಂತ.ಜೀವ ಭಯದಿಂದ ಆಟಗಾರ್ತಿಯ ಪೋಷಕರು ಸುಮ್ಮನೆ ಉಳಿದು ಬಿಟ್ಟಿದ್ದಾರೆ. ಆದರೆ, ವಾಲಿಬಾಲ್ ಕೋಚ್ ಆಟಗಾರ್ತಿಯ ಶಿರಚ್ಛೇದನದ ಆ ಸತ್ಯವನ್ನ ಬಿಚ್ಚಿಟ್ಟಿದ್ದಾನೆ. ಇದನ್ನ ಕೇಳಿದ ತಾಲಿಬಾನಿಗಳು ಕೋಚ್ ನನ್ನ ಇನ್ನಾವ ಗತಿಗೆ ತಲಪಿಸುತ್ತಾರೋ ದೇವರೆ ಬಲ್ಲ.
PublicNext
20/10/2021 08:41 pm