ಮುಂಬೈ: ಪಾಗಲ್ ಪ್ರೇಮಿಯೋರ್ವ ತನ್ನ ಪ್ರೇಯಸಿಯನ್ನು ನಡು ರಸ್ತೆಯಲ್ಲಿಯೇ ಬರ್ಬರವಾಗಿ ಕೊಲೆಗೈದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಮೃತ ಬಾಲಕಿ 14 ವರ್ಷದವಳಾಗಿದ್ದು, ಪುಣೆಯ ಬಿಬ್ವೆವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ 22 ವರ್ಷದ ರಿಷಿಕೇಶ್ ಭಾಗ್ವತ್‍ನನ್ನು ಪೊಲೀಸರು ಬಂಧಿಸಲಾಗಿದೆ.
ಬಾಲಕಿ ತನ್ನ ಸ್ನೇಹಿತೆರೊಂದಿಗೆ ಬರುತ್ತಿದ್ದ ವೇಳೆ ರಿಷಿಕೇಶ್ ಭಾಗ್ವತ್ ಆಕೆಯನ್ನು ರಸ್ತೆ ಮಧ್ಯೆ ತಡೆದು ಮಾತನಾಡಿಸಿದ್ದಾನೆ. ಅಷ್ಟೇ ಅಲ್ಲದೆ ಆಕೆಯೊಂದಿಗಿದ್ದ ಸ್ನೇಹಿತೆಯರನ್ನು ಬೆದರಿಸಿ ಓಡಿಸಿದ್ದಾನೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ರಿಷಿಕೇಶ್ ಬಾಲಕಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪರಿಣಾಮ ಬಾಲಕಿ ರಸ್ತೆಯಲ್ಲೇ ಸಾವನ್ನಪ್ಪಿದ್ದಾಳೆ.
ರಿಷಿಕೇಶ್ ಬಾಲಕಿಯನ್ನು ಪ್ರೀತಿಸುತ್ತಿದ್ದ. ಆದರೆ ಬಾಲಕಿ ಆತನನ್ನು ಪ್ರೀತಿಸುತ್ತಿರಲಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಆಕೆಯನ್ನು ಒತ್ತಾಯಿಸುತ್ತಿದ್ದ. ಆಕೆ ಮಾತ್ರ ಒಪ್ಪಿರಲಿಲ್ಲ. ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಬಾಲಕಿ ಕುಟುಂಬಸ್ಥರು ಆರೋಪಿಸಿದ್ದಾರೆ.
PublicNext
13/10/2021 02:41 pm