ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಹನಿಟ್ರ್ಯಾಪ್ ಮಾಡ್ತಿದ್ದ ಗ್ಯಾಂನ್‌ನ ಮೂವರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಸಾಕೀರ್, ಕಸಮ್ ಖಾನ್ ಹಾಗೂ ಜಮೀಲ್ ಖಾನ್ ಬಂಧಿತ ಆರೋಪಿಗಳು. ಮೂಲತಃ ರಾಜಸ್ಥಾನದ ಮೂಲದವರಾಗಿರುವ ಆರೋಪಿಗಳು ಫೇಸ್‌ಬುಕ್ ಮೂಲಕ ಯುವಕರ ನಂಬರ್ ಪಡೆದು ಹುಡುಗಿ ಹೆಸರಿನಲ್ಲಿ ವಿಡಿಯೋ ಕಾಲ್ ಮಾಡಿ ಲೈಂಗಿಕಾಸಕ್ತಿ ಹೆಚ್ಚುವಂತೆ ಪ್ರಚೋದನೆ ಮಾಡಿ ನಂತರ ಹುಡುಗರನ್ನ ವಿವಸ್ತ್ರಗೊಳಿಸಿ ಸ್ಕ್ರೀನ್ ರೆಕಾರ್ಡ್ ಮಾಡುತ್ತಿದ್ದರು. ನಂತರ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುವಂತೆ ಬೆದರಿಕೆ ಒಡ್ಡಿ ಹಣದ ಬೇಡಿಕೆ ಇಟ್ಟು ಕೊಡದಿದ್ದರೆ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕ್ತಿದ್ದ ಕಿರಾತಕರು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಸಾಲು ಸಾಲು ಹನಿಟ್ರ್ಯಾಪ್ ಕೇಸ್ ಸಿಐಡಿಯಲ್ಲಿ ದಾಖಲಾದ ಹಿನ್ನೆಲೆ ಕಾರ್ಯೋನ್ಮುಖರಾದ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಿರಾತಕರು ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್‌ಗಳನ್ನ ಸೃಷ್ಟಿಸಿ, ನಕಲಿ ಸಿಮ್‌ಕಾರ್ಡ್ ಗಳು, ನಕಲಿ ಇ ಪೇಮೆಂಟ್ ಬ್ಯಾಕ್ ಖಾತೆಗಳು ನಕಲಿ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್‌ಗಳ ಮೂಲಕ ವಂಚನೆ ಮಾಡಲು ವ್ಯವಸ್ಥಿತ ಜಾಲ ರಚಿಸಿಕೊಂಡು ಯುವಕರನ್ನು ಟಾರ್ಗೆಟ್ ಮಾಡುತ್ತಿತ್ತು.
ರಾಜಾಸ್ಥಾನ ಭರತ್ ಪುರ ಹಾಗೂ ಆಲ್ವಾರ್ ಎರಡು ಜಿಲ್ಲೆಗಳಲ್ಲಿ ಈ ಗ್ಯಾಂಗ್ ಬೀಡು ಬಿಟ್ಟಿದ್ದು ತುಂಬಾನೇ ಆಕ್ಟೀವ್ ಆಗಿತ್ತು. ಗ್ಯಾಂಗ್ ನ ಮತ್ತಷ್ಟು ಮಂದಿಯನ್ನು ಹುಡುಕಲು ಸಿಐಡಿ ಅಧಿಕಾರಿಗಳಿಂದ ಕಾರ್ಯಚರಣೆ ಮುಂದುವರಿಸಲಾಗಿದೆ.
PublicNext
12/10/2021 09:34 pm