ಮೈಸೂರು: ಚಲಿಸುತ್ತಿದ್ದ ಕಾರಿನ ಟೈಯರ್ ಸಿಡಿದು ತಾಯಿ-ಮಗ ಸಾವನ್ನಪ್ಪಿದ ಪ್ರಕರಣ ಇದೀಗ ಬೇರೆ ತಿರುವು ಪಡೆದಿದೆ.
ಹೌದು ದಟ್ಟಗಳ್ಳಿ ರಿಂಗ್ ರಸ್ತೆ ಬಳಿ ಟೈರ್ ಒಡೆದು ಗುಣಲಕ್ಷ್ಮೀ(35) ಮತ್ತು ಇವರ ಮಗ ದೈವಿಕ್(12) ಎಂಬವರು ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಆದರೆ ಮೃತರ ಮರಣೋತ್ತರ ಪರೀಕ್ಷೆ ನಡೆಸಿದಾಗ ಅನುಮಾನ ಹುಟ್ಟಿದೆ. ಅಷ್ಟೇ ಅಲ್ಲದೆ ದೈವಿಕ್ ಕುತ್ತಿಗೆಯಲ್ಲಿ ದಾರದಿಂದ ನೇಣು ಬಿಗಿದಂತೆ ಮಾರ್ಕ್ ಕಂಡು ಬಂದಿದ್ದು, ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.
ಟೈರ್ ಬ್ಲಾಸ್ಟ್ ವೇಳೆ ಗುಣಲಕ್ಷ್ಮೀ ಮತ್ತು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು ಅವರ ಪತಿ ಜಗದೀಶ್ ಸಣ್ಣಪುಟ್ಟ ಗಾಯಗಳಾಗಿರುವುದು ಮತ್ತಷ್ಟು ಅನುಮಾನ ಹುಟ್ಟಿಸಿದೆ. ಸದ್ಯ ಮೈಸೂರಿನ ಕುವೆಂಪು ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗ ಇದು ಅಪಘಾತವಲ್ಲ, ವ್ಯವಸ್ಥಿತ ಕೊಲೆ ಸಂಚು ಎಂಬ ಶಂಕೆ ಮೂಡಿದ ಹಿನ್ನೆಲೆಯಲ್ಲಿ ತನಿಖೆ ಚುರುಕಾಗಿದೆ.
PublicNext
07/10/2021 04:00 pm