ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನ್ ಲೈನ್ ಗೇಮಿಂಗ್ ನಿ‍ಷೇಧ;4000 ಉದ್ಯೋಗಿಗಳ ಜೀವನ ಅಯೋಮಯ

ಬೆಂಗಳೂರು:ಆನ್ ಲೈನ್ ಗೇಮ್,ಆನ್ ಲೈನ್ ಜೂಜು, ಆನ್ ಲೈನ್ ಬೆಟ್ಟಿಂಗ್ ಅನ್ನ ಕರ್ನಾಟಕ ಸರ್ಕಾರ ನಿಷೇಧಿಸಿದೆ. ಅಕ್ಟೋಬರ್-05 ರಿಂದಲೇ ಅದು ಜಾರಿ ಕೂಡ ಆಗಿದೆ. ಆದರೆ ಆನ್ ಲೈನ್ ಗೇಮಿಂಗ್ ಕಂಪನಿಗಳ ಕೆಲಸವನ್ನ ನಂಬಿಕೊಂಡ 4000 ಉದ್ಯೋಗಿಗಳ ಸ್ಥಿತಿ ಈಗ ಅಯೋಮಯವಾಗಿದೆ.

ರಾಜ್ಯದಲ್ಲಿ 19 ಆನ್ ಲೈನ್ ಗೇಮಿಂಗ್ ಕಂಪನಿಗಳು ಇವೆ. ಇವುಗಳನ್ನ ನಂಬಿಕೊಂಡು 4000 ಉದ್ಯೋಗಿಗಳು ಇದ್ದಾರೆ. ಸರ್ಕಾರ ರಾಜ್ಯದಲ್ಲಿ ಆನ್ ಲೈನ್ ಗೇಮಿಂಗ್ ನಿಷೇಧಿಸಿದೆ. ಇದರಿಂದ ಬೇಸರಗೊಂಡ ಆನ್ ಲೈನ್ ಗೇಮಿಂಗ್ ಕಂಪನಿಗಳು ಕಾನೂನು ಮೊರೆ ಹೋಗೋಕೆ ನಿರ್ಧರಿಸಿದೆ.

ಆನ್ ಲೈನ್ ಗೇಮೀಂಗ್ ಫೆಡರೇಶನ್ ನ ಸಿಇಓ ರೋಲ್ಯಾಂಡ್ ಲ್ಯಾಂಡರ್ಸ್, ತಮ್ಮ ಕರ್ನಾಟಕದ ಗೇಮಿಂಗ್ ಕಂಪನಿಯ ಸದಸ್ಯರಿಗೆ ಕಾನೂನು ರೀತಿ ಹೋರಾಡುವಂತೆ ತಿಳಿಸಿದ್ದಾರೆ.

Edited By :
PublicNext

PublicNext

07/10/2021 03:20 pm

Cinque Terre

35.27 K

Cinque Terre

7

ಸಂಬಂಧಿತ ಸುದ್ದಿ