ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಚ್ಚರ: ಬಾಡಿಗೆ ತಾಯಿಯ ಮೂಲಕ ಮಕ್ಕಳ ಪಡೆಯೋ ಪ್ಲಾನ್ ಮಾಡಿದ್ದೀರಾ?- ಈ ಸ್ಟೋರಿ ಓದಿ

ಬೆಂಗಳೂರು: ಮಕ್ಕಳಿಗಾಗಿ ಕಂಡ ಕಂಡ ದೇವರಿಗೆ ಕೈ ಮಗಿದು ಹಳ್ಳಕ್ಕೆ ಬೀಳೋ ಮುನ್ನ ಎಚ್ಚರ. ಹತ್ತು ಹಲವು ವರ್ಷ ಕೊರಗಿ ಮಕ್ಕಳಿಗಾಗಿ ಬಾಡಿಗೆ ತಾಯಿ ಮೊರೆ ಹೋಗೋ ಮುನ್ನ ಈ ಸ್ಟೋರಿಯನ್ನು ಒಮ್ಮೆ ಓದಿ.

ಹೌದು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಗ್ಯಾಂಗ್‌ಅನ್ನು ಪೊಲೀಸರು ಬಂಧಿಸಿದ್ದು, 13 ಮಕ್ಕಳನ್ನು ರಕ್ಷಿಸಿದ್ದಾರೆ. ಆರೋಪಿಗಳನ್ನು ದೇವಿಷಣ್ಮುಗಮ್ಮ, ಮಹೇಶ್ ಕುಮಾರ್, ಜನಾರ್ಧನ್, ರಂಜನಾ ದೇವಿಪ್ರಸಾದ್ ಹಾಗೂ ಧನಲಕ್ಷ್ಮೀ ಎಂದು ಗುರುತಿಸಲಾಗಿದೆ. ಇವರು ಬಡವರಿಂದ ಕಡಿಮೆ ಹಣಕ್ಕೆ ಮಕ್ಕಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.

ಮಕ್ಕಳಿಲ್ಲದ ಪೋಷಕರು, ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಬಯಸುವವರನ್ನು ಟಾರ್ಗೆಟ್ ಮಾಡಿಕೊಂಡು ಆರೋಪಿಗಳು ಈ ದಂಧೆಗೆ ಇಳಿದಿದ್ದಾರೆ. 2ರಿಂದ 3 ಲಕ್ಷ ರೂ.ಗೆ ಮಕ್ಕಳನ್ನು ಮಾರುತ್ತಿದ್ದ ಗ್ಯಾಂಗ್ ಸದ್ಯ ಪೊಲೀಸರ ಬಲೆಗೆ ಬಿದ್ದಿದೆ.

ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂಬಂಧ ಬಸವನಗುಡಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ 11 ಮಕ್ಕಳನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದ್ದು, ಇವರೆಗೂ 18 ಮಕ್ಕಳನ್ನು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.

Edited By : Vijay Kumar
PublicNext

PublicNext

06/10/2021 02:59 pm

Cinque Terre

33.94 K

Cinque Terre

0

ಸಂಬಂಧಿತ ಸುದ್ದಿ