ಮಂಗಳೂರು : ಮಂಗಳೂರಿನ ಮೋರ್ಗನ್ ಗೇಟ್ ಬಳಿ ಉದ್ಯಮಿ ರಾಜೇಶ್ ಪ್ರಭು ಎಂಬುವವರಿಂದ ಶೂಟೌಟ್ ನಡೆದಿದೆ. ಕೆಲಸದಾಳುವಿನ ಜೊತೆಗಿನ ಜಟಾಪಟಿ ಸಂದರ್ಭದಲ್ಲಿ ರಾಜೇಶ್ ಪ್ರಭು ಪಿಸ್ತೂಲ್ ನಿಂದ ಗುಂಡು ಹಾರಿದೆ. ಇನ್ನು ಮಿಸ್ ಫೈರ್ ಆಗಿ ರಾಜೇಶ್ ಪ್ರಭು ಪುತ್ರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸುಧೀಂದ್ರ ನ (14) ಮೇಲೆ ಗುಂಡು ಹಾರಿ ಬಾಲಕ ಸಾವನ್ನಪ್ಪಿದ್ದಾನೆ.
ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೋ ಲಿಮಿಟೆಡ್ ಕಂಪನಿಯ ಮಾಲಕ ರಾಜೇಶ್ ಪೈ ಬಳಿ ಸಂಬಳ ಕೇಳಲು ಕೆಲಸದಾಳು ಬಂದ ವೇಳೆ ರಾಜೇಶ್ ಪ್ರಭು ಮತ್ತು ಕೆಲಸದಾಳು ನಡುವೆ ಜಟಾಪಟಿ ಶುರುವಾಗಿದೆ. ಈ ವೇಳೆ ಕೋಪಗೊಂಡ ರಾಜೇಶ್ ಪ್ರಭು ಶೂಟ್ ಮಾಡಿದ್ದಾರೆ. ಈ ವೇಳೆ ಮಿಸ್ ಫೈರ್ ಆಗಿ ಕಚೇರಿ ಹೊರಭಾಗದಲ್ಲಿ ಕೂತಿದ್ದ ರಾಜೇಶ್ ಪ್ರಭು ಪುತ್ರ ಸುಧೀಂದ್ರ ತಲೆಯ ಭಾಗಕ್ಕೆ ಗುಂಡು ಬಿದ್ದಿದೆ.
PublicNext
05/10/2021 05:13 pm