ಬೆಂಗಳೂರು: ಕೇವಲ ಬಿಲ್ಡಪ್‌ಗಾಗಿ ಪೊಲೀಸರಿಗೆ ಧಮ್ ಕೊಟ್ಟಿದ್ದ ಕಿಡಿಗೇಡಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಂಜ ಅಲಿಯಾಸ್ ಮೆಂಟಲ್ ಮಂಜ ಎಂಬಾತನೇ ಬಂಧಿತ ಆರೋಪಿ. ಕುಳ್ಳ ವೆಂಕಟೇಶ್‌ನನ್ನು ಕೊಲೆ ಮಾಡಿದ್ದರಲ್ಲಿ ಎ1 ಆರೋಪಿ ಅನಿಲ್ ಅಲ್ಲ. ನಾನೇ ಎ1 ಆರೋಪಿ. ಮೊದಲು ನಾನೇ ಅವನನ್ನು ಹೊಡೆದಿದ್ದು. ತಾಕತ್ತಿದ್ದರೆ ನನ್ನ ಅರೆಸ್ಟ್ ಮಾಡಿ ಸರ್ ಎಂದು ಈತ ಪೊಲೀಸರಿಗೆ ಅವಾಜ್ ಹಾಕಿದ್ದ. ಇದರ ಆಡಿಯೋ ವೈರಲ್ ಆಗುತ್ತಲೇ ಈತ ತಮಿಳುನಾಡಿನಲ್ಲಿ ಅಡಗಿ ಕುಳಿತಿದ್ದ.
ಈಗ ಕುಳ್ಳ ವೆಂಕಟೇಶ್ ಕೊಲೆ ಪ್ರಕರಣದಲ್ಲಿ ಹಾಗೂ ಪೊಲೀಸರಿಗೆ ಬೆದರಿಕೆ ಹಾಕಿದ ಕೇಸ್ ಅಡಿ ಈತನನ್ನು ಆವಲಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಫೋನ್ ಸಂಭಾಷಣೆ ವೇಳೆ ಈತ ಎಸ್ಪಿ ಹಾಗೂ ಡಿವೈಎಸ್ಪಿ ಗೆ ನಾಲಯಕ್ ಎಂದಿದ್ದ. ಅಲ್ಲದೇ ಖಾಕಿ ಧರಿಸಿದರೆ ಸಾಲದು ನನ್ನನ್ನು ಬಂಧಿಸಿ ಎಂದು ಬಿಲ್ಡಪ್ ಗಾಗಿ ಅವಾಜ್ ಹಾಕಿದ್ದ.
PublicNext
03/10/2021 12:43 pm