ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಳಿ ಬದುಕಬೇಕಿದ್ದವ ಮಸಣ ಸೇರಿದ : . ದಾಯಾದಿ ಕಲಹಕ್ಕೆ ಬದುಕು ಬಲಿ

ಮಂಡ್ಯ: ಈಗಷ್ಟೇ ಮದುವೆಯಾಗಿ ಭವಿಷ್ಯದಲ್ಲಿ ಏನೇಲ್ಲಾ ನಡೆಯಬೇಕು ಎಂದು ಕನಸ್ಸು ಕಂಡವನು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ ಘಟನೆ ಕೆ.ಆರ್.ಪೇಟೆ ತಾಲೂಕಿನ ಮೂಡನಹಳ್ಳಿಯಲ್ಲಿ ನಡೆದಿದೆ. ಹೌದು ಒಂದೂವರೆ ತಿಂಗಳ ಹಿಂದೆಯಷ್ಟೇ ಮೂಡನಹಳ್ಳಿ ಮೃತ ರಘು (29) ಮದುವೆಯಾಗಿತ್ತು. ದಾಯಾದಿ ಕಲಹಕ್ಕೆ ರಘು ಕೊಲೆಯಾಗಿದ್ದಾನೆ. ಸ್ವಂತ ಕಾರು ಹೊಂದಿದ್ದ ರಘು ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮದುವೆ ಸಂಭ್ರಮದಲ್ಲಿದ್ದ ಎರಡೂ ಕುಟುಂಬಸ್ಥರ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.

ಕೊರೊನಾ ಹಿನ್ನೆಲೆ ರಘು ಸ್ವಗ್ರಾಮ ಮೂಡನಹಳ್ಳಿಗೆ ಬಂದಿದ್ದ ಸೆ.26ರಂದು ಬೆಂಗಳೂರಿಗೆ ಹೊರಡಲು ನಿರ್ಧರಿಸಿದ್ದ 26 ರಾತ್ರಿ ಕಾರನ್ನು ಸ್ವಚ್ಛ ಮಾಡುತ್ತಿದ್ದ. ಈ ವೇಳೆ ಹಿಂದಿನಿಂದ ದುಷ್ಕರ್ಮಿ ರಘು ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ.

ಸುಟ್ಟಗಾಯಗಳಿಂದ ನರಳುತ್ತಿದ್ದ ರಘು ಇಂದು ಮೃತಪಟ್ಟಿದ್ದಾನೆ. ಸದ್ಯ ರಘು ಸಂಬಂಧಿ ಶಿವು ಎಂಬಾತನೇ ಬೆಂಕಿ ಹಚ್ಚಿದ್ದು ಎಂಬ ಆರೋಪ ಕೇಳಿಬಂದಿದೆ. ಸದ್ಯ ಶಿವು ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.

Edited By : Nirmala Aralikatti
PublicNext

PublicNext

01/10/2021 06:21 pm

Cinque Terre

63.49 K

Cinque Terre

1