ಕೊಪ್ಪಳ: ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಲಾರಿ ಸಮೇತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಅಕ್ಕಿಯನ್ನು ಗಂಗಾವತಿಯಿಂದ ಗುಜರಾತ್‌ಗೆ ಸಾಗಿಸಲಾಗುತ್ತಿತ್ತು. ಕುಷ್ಟಗಿ ತಾಲೂಕಿನ ಬೋದೂರು ಬಳಿಯ ಟೋಲ್ ಪ್ಲಾಜಾ ಬಳಿ ಘಟನೆ ನಡೆದಿದೆ.
ಕುಷ್ಟಗಿ ಆಹಾರ ಇಲಾಖೆಯ ನಿರೀಕ್ಷಕ ನಿತೀನ್ ಅಗ್ನಿ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಅಕ್ಕಿಯನ್ನು ವಶಕ್ಕೆ ಪಡೆದು ಗೋದಾಮಿಗೆ ಸಾಗಿಸಿದ್ದಾರೆ. ಲಾರಿಯಲ್ಲಿ ಒಟ್ಟು 340 ಕ್ವಿಂಟಾಲ್ ಅನ್ನಭಾಗ್ಯದ ಅಕ್ಕಿ ಇತ್ತು ಎಂಬ ಮಾಹಿತಿ ಇದೆ. ಇದರ ಬೆಲೆ ಸುಮಾರು 8.10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಲಾರಿ ಚಾಲಕ ಮದನಲಾಲ್, ಗಂಗಾವತಿಯ ಟ್ರೇಡರ್ ಅಭಿಜಿತ್ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
01/10/2021 08:03 am