ಚಿಕ್ಕೋಡಿ: ಕಬ್ಬಿನ ಗದ್ದೆಯ ಮಧ್ಯೆ ಬೆಳೆದಿದ್ದ ಒಂದೂವರೆ ಲಕ್ಷ ರೂ. ಮೌಲ್ಯದ ಗಾಂಜಾ ವಶವನ್ನು ರಾಯಬಾಗ ಅಬಕಾರಿ ಇನ್ಸ್‌ಪೆಕ್ಟರ್ ಜೆಟ್ಟೆಪ್ಪಾ ಮಾಳಾಬಗಿ ನೇತೃತ್ವದಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ.
ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಸಮೀಪದ ಹಾರುಗೇರಿ ಗ್ರಾಮದ ಅಣ್ಣಾಸಾಬ ಬಾಬು ಧರ್ಮಣ್ಣವರ ಜಮೀನಿನಲ್ಲಿ ನಾಲ್ಕು ಗಾಂಜಾ ಮರಗಳು ಬೆಳೆದಿದ್ದರು. ಈ ಬಗ್ಗೆ ಅಥಣಿ ಅಬಕಾರಿ ಡಿವೈಎಸ್‌ಪಿ ಎಲ್.ಎಸ್ ಸಲಗರೆ ಹಾಗೂ ರಾಯಬಾಗ ತಹಶೀಲ್ದಾರ ಆರ್.ಎಚ್ ಭಾಗವಾನ ಮಾರ್ಗದರ್ಶನದಲ್ಲಿ ರಾಯಬಾಗ ಅಬಕಾರಿ ಇನ್ಸ್‌ಪೆಕ್ಟರ್ ಜೆಟ್ಟೆಪ್ಪ ಅವರಿಗೆ ಮಾಹಿತಿ ಲಭಿಸಿತ್ತು. ತಕ್ಷಣವೇ ದಾಳಿಸಿದ ಅಧಿಕಾರಿಗಳು ಗಾಂಜಾ ಮರಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ರೈತ ಅಣ್ಣಾಸಾಬ ಬಾಬು ವಿರುದ್ಧ ರಾಯಬಾಗ ಅಬಕಾರಿ ನೀರಿಕ್ಷಕರ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.
PublicNext
30/09/2021 10:56 pm