ಚಿಕ್ಕೋಡಿ: ನಿವೃತ್ತ ಸೈನಿಕರೊಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಳಕೂಡ ಗ್ರಾಮದಲ್ಲಿ ನಡೆದಿದೆ.
ಬೆಳಕೂಡ ಗ್ರಾಮದ ಪನ್ನಾಮಲ್ಲೇಶ ರಾಮಪ್ಪ ಕರನಿಂಗ್ (38) ಸಾವನ್ನಪ್ಪಿದ ನಿವೃತ್ತ ಸೈನಿಕ. ನಿನ್ನೆ ಮಧ್ಯಾಹ್ನ ಕುಡಿದ ಅಮಲಿನಲ್ಲಿ ಬಾವಿಗೆ ಬಿದ್ದು ಸಾವನ್ನಪ್ಪಿದಾರೆ. ಸ್ಥಳೀಯರು,ಅಗ್ನಿಶಾಮಕದಳ ಹಾಗೂ ಪೊಲೀಸರ ಸಹಕಾರದಿಂದ ಬಾವಿಯಿಂದ ಮೃತದೃಹವನ್ನು ಹೊರ ತೆಗೆಯಲಾಗಿದೆ. ಪನ್ನಾಮಲೇಶ ಕಳೆದ ವರ್ಷ ಸೇನೆಯಿಂದ ನಿವೃತ್ತಿಗೊಂಡಿದ್ದರು.ಚಿಕ್ಕೋಡಿ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
29/09/2021 08:41 pm