ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಮಗುವಿನೊಂದಿಗೆ ನದಿಗೆ ಹಾರಿದ ತಾಯಿ: ತಾಯಿಯಿಂದ ತಪ್ಪಿಸಿಕೊಂಡ ಇಬ್ಬರು ಮಕ್ಕಳು ಬಚಾವ್..!

ಗದಗ: ಮೂರು ಮಕ್ಕಳ ಸಮೇತವಾಗಿ ತಾಯಿಯೊಬ್ಬಳು ನದಿಗೆ ಹಾರಿದ ಸಂದರ್ಭದಲ್ಲಿ ಇಬ್ಬರು ಮಕ್ಕಳು ತಾಯಿ ಕೈಯಿಂದ ತಪ್ಪಿಸಿಕೊಂಡ ಪಾರಾದ ಹೃದಯ ವಿದ್ರಾವಕ ಘಟನೆ ಗದಗನಲ್ಲಿ ನಡೆದಿದೆ.

ರೋಣ ತಾಲೂಕಿನ ಹೋಳೆಆಲೂರ ಗ್ರಾಮದ ಮಲಪ್ರಭಾ ನದಿಯಲ್ಲಿ ಈ ಹೃದವಿದ್ರಾವಕ ಘಟನೆ ನಡೆದಿದ್ದು, ಉಮಾದೇವಿ 45, 4 ವರ್ಷದ ಹೆಣ್ಣು ಮಗುವಿನೊಂದಿಗೆ ನದಿಗೆ ಹಾರಿದ್ದಾರೆ. ಮೂರು ತಿಂಗಳ ಹಿಂದೆ ಪತಿ ಸಂಗಮೇಶ ಚಲ್ಲಿಕೇರಿ ಕೋವಿಡ್ ನಿಂದ ಸಾವನ್ನಪ್ಪಿದ್ದರು ಪತಿಯ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಹೇಳಲಾಗ್ತಿದೆ. ಉಮಾದೇವಿ ಮೂರು ಮಕ್ಕಳ ಸಮೇತ ನದಿಗೆ ಹಾರಲು ತಾಯಿ ಯತ್ನಿಸಿದಾಗ 12 ಹಾಗೂ 14 ವರ್ಷದ ಮಕ್ಕಳು ಅವಳಿಂದ ಓಡಿಬಂದು ಬಚಾವ್ ಆಗಿವೆ ಇನ್ನೊಬ್ಬ ಮಗಳು ಗದಗನಲ್ಲಿ ಓದುತ್ತಿದ್ದಾಳೆ.

ಸ್ಥಳಕ್ಕೆ ರೋಣ ಪೊಲೀಸರು ದೌಡಾಯಿಸಿದ್ದು ಅಗ್ನಿಶಾಮಕ ದಳ ಸಿಬ್ಬಂದಿ ತಾಯಿ, ಮಗುವಿಗೆ ಶೋಧ ನಡೆಸಿದ್ದಾರೆ. ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ..

Edited By : Shivu K
PublicNext

PublicNext

29/09/2021 04:10 pm

Cinque Terre

86.67 K

Cinque Terre

4

ಸಂಬಂಧಿತ ಸುದ್ದಿ