ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೇಶ್ಯಾವಾಟಿಕೆ ದಂಧೆ : ಐವರು ಅಂದರ್

ಹಾಸನ : ಖಚಿತ ಮಾಹಿತಿ ಮೇರೆಗೆ ಇಂದು ವೇಶ್ಯಾವಾಟಿಕೆ ಆರೋಪದಡಿಯಲ್ಲಿ ಮನೆಯೊಂದರ ಮೇಲೆ ಪೊಲೀಸರು ದಾಳಿ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ದಾಳಿ ನಡೆಸಿದ ಹಾಸನ ನಗರ ಹಾಗೂ ಮಹಿಳಾ ಠಾಣೆ ಪೊಲೀಸರು ಇಬ್ಬರು ಮಹಿಳೆಯರು ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿ ವೇಳೆ ಇಬ್ಬರು ಮಹಿಳೆಯರ ರಕ್ಷಣೆ ಮಾಡಲಾಗಿದೆ.

ನಗರದ ಎರಡು ಕಡೆ ಏಕ ಕಾಲದಲ್ಲಿ ದಾಳಿ ನಡೆದಿದ್ದು, ಚೇತನ್,ಅಕ್ಬರ್ ಸತೀಶ್ ಎಂಬ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರ ಬಂಧನವಾಗಿದೆ. ಈ ಸಂಬಂಧ ಹಾಸನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಅಲ್ಲದೇ ವೇಶ್ಯಾವಾಟಿಕೆ ನಡೆಸುತ್ತಿರುವ ಸಂಬಂಧ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

Edited By : Nirmala Aralikatti
PublicNext

PublicNext

29/09/2021 11:24 am

Cinque Terre

40.29 K

Cinque Terre

0

ಸಂಬಂಧಿತ ಸುದ್ದಿ