ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನ ಕ್ಷಣಾರ್ಧದಲ್ಲೇ ರಕ್ಷಿಸಿದ ಆಟೋ ಚಾಲಕ- ವಿಡಿಯೋ ವೈರಲ್

ಭೋಪಾಲ್: ರೈಲ್ವೆ ಹಳಿ ಮೇಲೆ ನಿಂತು ಆತ್ಮಹತ್ಯೆಗೆ ಯತ್ನಿಸಿದ ಯುವತಿಯೊಬ್ಬಳನ್ನು ಆಟೋ ಚಾಲಕನೋರ್ವ ಕ್ಷಣಾರ್ಧದಲ್ಲೇ ರಕ್ಷಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ ನಡೆದಿದ್ದು, ಆಟೋ ಚಾಲಕನ ಸಮಯ ಪ್ರಜ್ಞೆ ಹಾಗೂ ಸಾಹಸ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಆಗಿದ್ದೇನು?:

ರೈಲು ಬರುತ್ತಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರ ತಡೆಯಲು ಗೇಟ್ ಹಾಕಲಾಗಿತ್ತು. ಆದರೆ ಯುವತಿಯೊಬ್ಬಳು ಗೇಟ್‌ ಕೆಳಗಿ ನುಸುಳಿ ರೈಲ್ವೆ ಟ್ರ್ಯಾಕ್ ಮೇಲೆ ನಿಂತು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣವೇ ಆಟೋ ಚಾಲಕ ಯುವತಿಯನ್ನು ಹಿಡಿದು ಟ್ರ್ಯಾಕ್‌ನಿಂದ ಹೊರಗೆ ಎಳೆದು ತಂದಿದ್ದಾರೆ. ಆದರೆ ಯುವತಿ ಮಾತ್ರ ನನ್ನನ್ನು ಸಾಯಲು ಬಿಡಿ ಬಿಡಿ ಎಂದು ಕಣ್ಣೀರಿಟ್ಟ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

Edited By : Vijay Kumar
PublicNext

PublicNext

28/09/2021 05:11 pm

Cinque Terre

108.27 K

Cinque Terre

1