ಲಾಕ್ ಡೌನ್ ಬಳಿಕ ಮಕ್ಕಳನ್ನು ಮನೆಯಿಂದ ಶಾಲೆಗೆ ಕಳುಹಿಸುವ ಮೊದಲು ಪಾಲಕರು ಮಕ್ಕಳಿಗೆ ಕೆಲವು ಅಗತ್ಯ ಮಾಹಿತಿಯನ್ನು ಮನದಟ್ಟು ಮಾಡಿ ಕಳುಹಿಸಿ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ಕೂಡಾ ಬರುತ್ತಿವೆ.
ಕೆಲವರು ಇದು ನಿಜಾ ಎಂದರೆ ಇನ್ನೂ ಕೆಲವರು ಇದನ್ನು ಬೇಕು ಅಂತಾನೆ ಶೂಟ್ ಮಾಡಿಸಿದ್ದಾರೆ ಎಂದು ತಮ್ಮ ಅಭಿಪ್ರಾಯ ಹೇಳುತ್ತಿದ್ದಾರೆ. ಆದ್ರೆ ಅಭಿಪ್ರಾಯ ಅದೇನೆ ಇದ್ದರೂ ವಿಡಿಯೋ ಒಂದು ಉತ್ತಮ ಸಂದೇಶ ಸಾರುತ್ತಿರುವುದಂತೂ ಸುಳ್ಳಲ್ಲ.
ವಿಡಿಯೋದಲ್ಲಿ ಏನಿದೇ?
ಒಂದು ಶಾಲೆಯ ಮುಂದೆ ಬಾಲಕಿಯೋರ್ವಳು ತಮ್ಮ ಪಾಲಕರ ಬರುವಿಕೆಗಾಗಿ ಕಾಯುತ್ತಿರುತ್ತಾಳೆ. ಈ ವೇಳೆ ಬೈಕ್ ಮೇಲೆ ವಿದ್ಯಾರ್ಥಿನಿಯನ್ನು ಗಮನಿಸುತ್ತಾ ಮುಂದೆ ಸಾಗುವ ಯುವಕನೋರ್ವ ಅಣತಿ ದೂರದಲ್ಲಿ ಬೈಕ್ ನಿಲ್ಲಿಸಿ ಬಾಲಕಿ ಬಳಿ ಬಂದು ಅವಳಿಗೆ ವಿವಿಧ ಆಮಿಷಗಳನ್ನು ಒಡ್ಡಿ ಹೊತ್ತೊಯ್ಯಲು ವಿಫಲ ಪ್ರಯತ್ನ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ವೇಳೆ ಯುವಕನ ಯಾವ ಮಾತಿಗೂ ಒಪ್ಪದ ಬಾಲಕಿ ಶಾಲೆಯ ಒಳಗೆ ಓಡಿಹೋಗಿ ಶಿಕ್ಷಕಿಯನ್ನು ಕರೆತರುತ್ತಾಳೆ. ಈ ವೇಳೆ ಯುವಕ ಶಿಕ್ಷಕಿಯನ್ನು ಯಾಮಾರಿಸಲು ಮುಂದಾಗುತ್ತಾನೆ. ಆದರೆ ಬಾಲಕಿ ಇವನಾರೊ ನನಗೆ ಗೊತ್ತಿಲ್ಲ ಎಂದಾಕ್ಷಣ ಎಚ್ಚತ್ತುಕೊಂಡ ಶಿಕ್ಷಕಿ ಅಕ್ಕಪಕ್ಕದವರನ್ನು ಸೇರಿಸಲು ಮುಂದಾಗುತ್ತಿದ್ದಂತೆ ಯುವಕ ಎಸ್ಕೇಪ್ ಆಗುತ್ತಾನೆ.
ಒಟ್ಟಾರೆಯಲ್ಲಿ ವೈರಲ್ ಆದ ವಿಡಿಯೋ ಹೇಳುವುದು ಇಷ್ಟೇ, ನಿಮ್ಮ ಮಕ್ಕಳಿಗೆ ಯಾವುದೇ ಆಸೆ ಆಮಿಷ್ಯಕ್ಕೆ ಒಳಗಾಗಿ ಅಪರಿಚಿತರ ಜೊತೆ ಹೋಗದ್ದಂತೆಯೂ ತಿಳಿ ಹೇಳಿ ಎನ್ನುವುದಾಗಿದೆ.
PublicNext
26/09/2021 07:09 pm