ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸ್ಫೋಟದಲ್ಲಿ ಮೂವರ ದೇಹ ಛಿದ್ರ ಛಿದ್ರ.! ಟೀ ಕುಡಿಯಲು ಹೋಗಿ ಜೀವ ತೆತ್ತ ಯುವಕ.?

ಬೆಂಗಳೂರು: ನಗರತ್ ನಗರದಲ್ಲಿರುವ ಲಾರಿ ಟ್ರಾನ್ಸ್​ಪೋರ್ಟ್ ಗೋಡಾನ್​​ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ಮೃತರನ್ನು ಅಸ್ಲಾಂ ಪಾಷಾ (45), ಮನೋಹರ್ (29) ಹಾಗೂ ಫಯಾಜ್ ಎಂದು ಗುರುತಿಸಲಾಗಿದೆ. ಅಸ್ಲಾಂ ಪಾಷಾ ಎನ್ನುವವರು ಸ್ಫೋಟ ಸಂಭವಿಸಿದ ಪಕ್ಕದಲ್ಲೇ ಪಂಕ್ಚರ್ ಅಂಗಡಿ ಹಾಕಿಕೊಂಡಿದ್ದರು. ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದಾಗ ಸ್ಫೋಟ ಸಂಭವಿಸಿದ ಪರಿಣಾಮ, ಅದರ ತೀವ್ರತೆಗೆ ಅಸ್ಲಾಂ ಪಾಷಾ ಕೂಡ ಸಾವನ್ನಪ್ಪಿದ್ದಾರೆ. ಇನ್ನು ಮನೋಹರ್​ ಅನ್ನೋರು ಟಾಟಾ ಏಸ್​ನ ಡ್ರೈವರ್ ಆಗಿದ್ದರು. ಟೀ ಕುಡಿಯಬೇಕು ಅಂತ ಅಲ್ಲಿಗೆ ಬಂದಿದ್ದರಂತೆ. ಆದರೆ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

Edited By : Vijay Kumar
PublicNext

PublicNext

23/09/2021 02:36 pm

Cinque Terre

59.83 K

Cinque Terre

0

ಸಂಬಂಧಿತ ಸುದ್ದಿ