ಬೆಂಗಳೂರು: ಬೆಂಗಳೂರು ಜನರನ್ನು ಬೆಚ್ಚಿ ಬೀಳಿಸಿದ ಕ್ಯಾಬ್ ಡ್ರೈವರ್ ಒಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದೆ.
ಹೆಚ್‌ಎಸ್‌ಆರ್ ಲೇಔಟ್‌ನಿಂದ ಹೊರಟ ಕ್ಯಾಬ್ ಕೇವಲ 20 ನಿಮಿಷದಲ್ಲಿ ಮುರುಗೇಶ್ ಪಾಳ್ಯದಲ್ಲಿರುವ ಯುವತಿ ಮನೆ ಬಳಿಗೆ ಬಂದಿದೆ. ಆಗ ನಿದ್ದೆ ಮಂಪರಿನಲ್ಲಿದ ಯುವತಿಯನ್ನು ಎದ್ದೇಳಿಸಲು ಕ್ಯಾಬ್ ಡ್ರೈವರ್ ಹಿಂದಿನ ಡೋರ್ ತೆಗೆದಿದ್ದಾನೆ. ಈ ವೇಳೆ ಯುವತಿ ಮೇಲೆರಗಿ ಅತ್ಯಾಚಾರವೆಸೆಗಿ ಅಟ್ಟಹಾಸ ಮೆರೆದಿದ್ದಾನೆ ಎನ್ನಲಾಗಿದೆ.
ಆರೋಪಿ ಕ್ಯಾಬ್ ಡ್ರೈವರ್‌ಗೆ ಪೊಲೀಸರು ಫುಲ್ ಚಾರ್ಜ್ ಮಾಡುತ್ತಿದೆ. ಆದರೆ ಆರೋಪಿ ಮಾತ್ರ ನಾನೇನು ಮಾಡಿಲ್ಲ. ನಾನು ಅಂಥವನಲ್ಲ ಅಂತ ಹೇಳುತ್ತಿದ್ದಾನೆ. ಸದ್ಯ ಸಂತ್ರಸ್ತ ಯುವತಿ, ಆರೋಪಿ ಇಬ್ಬರಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಅತ್ಯಾಚಾರ ನಡೆದಿರುವುದಾಗಿ ಪೊಲೀಸರಿಗೆ ಮೌಖಿಕವಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಆದರೆ ಈಗ ಯುವತಿ ಮೆಡಿಕಲ್ ರಿಪೋರ್ಟ್ ಮೇಲೇ ಕೇಸ್ ನಿಂತಿದ್ದು ಕುತೂಹಲ ಕೆರಳಿಸಿದೆ. ಇಂದು ಜಡ್ಜ್ ಮುಂದೆ ಆರೋಪಿ ದೇವರಾಜ್‌ನನ್ನ ಪೊಲೀಸರು ಹಾಜರುಪಡಿಸಲಿದ್ದಾರೆ.
ಯುವತಿ ಹೇಳಿದ್ದೇನು?:
ಫ್ರೆಂಡ್ ಮನೆಗೆ ಹೋಗಿದ್ದ ಯುವತಿ ವಾಪಸ್ ಕ್ಯಾಬ್‌ನಲ್ಲಿ ಬಂದಿದ್ದಾರೆ. ಹೆಚ್‍ಎಸ್‍ಆರ್ ಲೇಔಟ್ ನಿಂದ 3:20ಕ್ಕೆ ಕ್ಯಾಬ್ ಬುಕ್ ಮಾಡಿ ಮರುಗೇಶ್ ಪಾಳ್ಯಕ್ಕೆ ಬಂದಿದ್ದಾರೆ. ಅಲ್ಲಿಂದ ಇಪ್ಪತ್ತು ನಿಮಿಷಕ್ಕೆ ಸ್ಪಾಟ್‌ಗೆ ಬಂದಿದ್ದು, ಬೆಳಗ್ಗಿನ ಜಾವ 3.40ರ ಸುಮಾರಿಗೆ ಅತ್ಯಾಚಾರ ನಡೆದಿದೆ. ಮನೆ ಹತ್ತಿರ ಬಂದಾಗ ಚಾಲಕ ದೇವರಾಜು ಅಲಿಯಾಸ್ ದೇವರಾಜುಲು, ನಿದ್ದೆಯಲ್ಲಿದ್ದ ಯುವತಿಯನ್ನು ಎಬ್ಬಿಸಲು ಹೋಗಿದ್ದಾನೆ. ಹೀಗೆ ಹೋದಾಗ ಆತ ಯುವತಿಯ ಮೈ ಮೇಲೆ ಬಿದ್ದಿದ್ದಾನೆ. ಆಗ ಆತ ಮುಂದುವರಿದು ಆಕೆಯ ಬಟ್ಟೆ ಬಿಚ್ಚಿದ್ದಾನೆ, ನಂತರ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬುದಾಗಿ ವಿಚಾರಣೆ ವೇಳೆ ಯುವತಿ ತಿಳಿಸಿದ್ದಾರೆ ಎನ್ನಲಾಗಿದೆ.
ಮೊದಲು ಅವನು ಅವನ ಬಟ್ಟೆ ಬಿಚ್ಚಿದ್ದ, ನಂತರ ನನ್ನ ಬಟ್ಟೆಯನ್ನು ಬಿಚ್ಚಿದ್ದ. ಬಳಿಕ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ. ಯುವತಿ ದೂರಿನ ಹಿನ್ನೆಲೆಯಲ್ಲಿ ಸದ್ಯ ಇಬ್ಬರ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ. ಅರೋಪಿ ಸಹ ಪೊಲೀಸರು ವಶಕ್ಕೆ ಪಡೆಯುವಾಗ ಅದೇ ಬಟ್ಟೆಯಲ್ಲಿ ಇದ್ದ, ಇತ್ತ ಆಕೆಯೂ ಅದೇ ಬಟ್ಟೆಯಲ್ಲಿ ಇದ್ದಳು. ನಂತರ ಇಬ್ಬರ ಬಟ್ಟೆ ವಶಕ್ಕೆ ಪಡೆದುಕೊಳ್ಳಲಾಗಿದೆ.
ಬೆಳಗ್ಗಿನ ಜಾವ 112 ಗೆ ಕರೆಮಾಡಿ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಯುವತಿ ಮನೆಗೆ ಹೋಗಿ ಮಾಹಿತಿ ಪಡೆದಿದ್ದಾರೆ. ನಂತರ ಮಹಿಳಾ ಅಧಿಕಾರಿ ಕರೆಸಿ ಠಾಣೆಗೆ ಯುವತಿ ಕರೆದುಕೊಂಡು ಹೋಗಿದ್ದಾರೆ. 7 ಗಂಟೆಗೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಅರೋಪಿ ಮೊಬೈಲ್ ಮತ್ತು ಕಾರ್ ನಂಬರ್ ಊಬರ್ ರಿಜಿಸ್ಟರ್ ಅನ್ವಯ ಹುಡುಕಿದ್ದಾರೆ. ಘಟನೆ ಬಳಿಕ ಅವಲಹಳ್ಳಿಯ ತನ್ನ ರೂಮ್ ನಲ್ಲಿದ್ದ ಅರೋಪಿಯನ್ನು 11 ಗಂಟೆ ಸುಮಾರಿಗೆ ಪೊಲೀಸರು ವಶಕ್ಕೆ ಪಡೆದರು. ನಂತರ ವಿಚಾರಣೆ ಬಳಿಕ ಮಧ್ಯಾಹ್ನ 2 ಗಂಟೆಗೆ ಆರೋಪಿಯನ್ನು ಬಂಧಿಸಲಾಗಿದೆ.
ಸೆಲ್ಫಿ ಫೋಟೋ:
ಕ್ಯಾಬ್ ಡ್ರಾಪ್ ಪಾಯಿಂಟ್‌ಗೆ ಬರುತ್ತಿದ್ದಂತೆ ಯುವತಿಯನ್ನ ಎದ್ದೇಳಿಸಲು ಹಿಂಬದಿ ಡೋರ್ ತೆಗೆದಿದ್ದಾನೆ. ಈ ವೇಳೆ ಕ್ಯಾಬ್ ಡ್ರೈವರ್ ಯುವತಿಯೊಂದಿಗೆ ಕೆಲ ಸೆಲ್ಫಿಗಳನ್ನು ತೆಗೆದುಕೊಂಡಿರುವುದು ಮೊಬೈಲ್ ಪರಿಶೀಲನೆ ವೇಳೆ ಪತ್ತೆಯಾಗಿದೆ.
ಅತ್ಯಾಚಾರ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದ ಕ್ಯಾಬ್ ಡ್ರೈವರ್, ಐದು ನಿಮಿಷಗಳ ಬಳಿಕ ಮತ್ತದ್ದೇ ಜಾಗಕ್ಕೆ ಬಂದಿದ್ದಾನೆ. ಏಕೆಂದರೆ ಉಬರ್ ಟ್ರಿಪ್ ಕಂಪ್ಲೀಟ್ ಆಗಿರಲಿಲ್ಲ. ಹಾಗಾಗಿ ಆತ ಮೊಬೈಲ್‌ಗಾಗಿ ಕಾರಿನಲ್ಲಿ ತಡಕಾಡಿದ್ದಾನೆ. ಕೊನೆಗೆ ಘಟನೆ ನಡೆದ ಸ್ಥಳದಲ್ಲೇ ಇರಬಹುದೆಂದು ಬಂದಿದ್ದಾನೆ. ಆದರೆ ಯುವತಿ ಗಾಬರಿಯಲ್ಲಿ ಹಿಂದಿನ ಸೀಟಿನಲ್ಲಿದ್ದ ಈತನ ಮೊಬೈಲನ್ನ ಸಹ ತೆಗೆದುಕೊಂಡು ಹೋಗಿದ್ದರಳು.
ಎಸಿಪಿ ಹಲಸೂರು ಕುಮಾರ್‌ಗೆ ಮುಂದಿನ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇಂದು ಆರೋಪಿಯನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡೆಸಲಿದ್ದಾರೆ.
PublicNext
23/09/2021 12:25 pm