ಚಿಕ್ಕೋಡಿ: ಗಣೇಶ ವಿಸರ್ಜನೆ ವೇಳೆ ಮಹಾರಾಷ್ಟ್ರ ಮೂಲದ ವ್ಯಕ್ತಿಗೆ ಅಪರಿಚಿತರು ಚಾಕುವಿನಿಂದ ಇರಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ.
ಹಲ್ಲೆಗೊಳಗಾದ ವಿಶಾಲ ವಿಷ್ಣು ಶೇವಡೆ (27) ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕುರ್ಲಿ ಗ್ರಾಮದ ಯುವಕ ಎಂದು ತಿಳಿದು ಬಂದಿದೆ. ಅಪರಿಚಿತ ವ್ಯಕ್ತಿ ಚಾಕು ಇರಿದು ಪರಾರಿ ಆಗಿದ್ದಾನೆ. ಗಾಯಾಳು ವಿಶಾಲ್‌ನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಣೇಶ ವಿಸರ್ಜನೆ ವೇಳೆ ಡಾಲ್ಬಿ ಡಿಜೆ ಬಳಕೆ ಮಾಡಲಾಗಿತ್ತು. ಡಾಲ್ಬಿ ಡಿಜೆ ನೋಡಲು ಸದಲಗಾ ಪಟ್ಟಣಕ್ಕೆ ವಿಶಾಲ ಆಗಮಿಸಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಡಿಜೆ ಬಳಸದಂತೆ ಸರ್ಕಾರದ ಆದೇಶ ಇದ್ದರೂ, ನಿಪ್ಪಾಣಿ ಪಟ್ಟಣದಲ್ಲಿ ಡಿಜೆ ಬಳಕೆ ಮಾಡಿದರೂ ಪೊಲೀಸ್ ಇಲಾಖೆ ಸುಮ್ಮನೆ ಕುಳಿತಿದೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬಂದಿದೆ.
PublicNext
22/09/2021 12:41 pm