ಬೆಂಗಳೂರು: 'ಗೀತಾ ಗೋವಿಂದಂ' ಸಿನಿಮೀಯ ಶೈಲಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿಗೆ ಕಿಸ್ ಕೊಟ್ಟು ಪರಾರಿಯಾಗಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಮೂಲದ ಎಂಜಿನಿಯರ್ ಮಧುಸೂದನ್ ರೆಡ್ಡಿ(25) ಬಂಧಿತ ಆರೋಪಿ. ಯುವತಿಯು ಸೆಪ್ಟೆಂಬರ್ 12ರಂದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಿದ್ದಳು. ಈ ವೇಳೆ ಆಕೆಯ ಪಕ್ಕದ ಸೀಟ್‌ನಲ್ಲಿ ಕುಳಿದ್ದ ಯುವಕ ಯುವತಿಗೆ ಮಲಗಿದ್ದಾಗ ಕಿಸ್ ಕೊಟ್ಟು ಪರಾರಿಯಾಗಿದ್ದ. ತಕ್ಷಣವೇ ಯುವತಿಯು ಪೊಲೀಸರಿಗೆ ದೂರು ನೀಡಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
PublicNext
22/09/2021 12:19 pm