ಆತ 40 ವರ್ಷದಿಂದ HIV Positive ರೋಗಿಯಾಗಿದ್ದು, ದತ್ತು ಮಗಳ ಮೇಲೆ ತಿಂಗಳುಗಳ ಕಾಲ ನಿರಂತರ ಅತ್ಯಾಚಾರ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ.
ಸಂತ್ರಸ್ಥೆ ಶಾಲೆಯ ವಾರ್ಡನ್ ಗೆ ತಾನು ಅನುಭವಿಸುತ್ತಿರುವ ನರಕದ ಬಗ್ಗೆ ಹೇಳಿದ ನಂತರ ದೂರು ದಾಖಲಾಗಿದೆ. ಸಂತ್ರಸ್ಥೆ ಅಪ್ರಾಪ್ತೆಯಾಗಿದ್ದು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆ. ಜತೆಗೆ ಆಕೆ ಶಾಲೆಯ ಹಾಸ್ಟೆಲ್ ನಲ್ಲೇ ವಾಸವಿದ್ದಳು, ಆದರೆ ಕೊರೊನಾ ಆರಂಭವಾದ ನಂತರ, ಹಾಸ್ಟೆಲ್ ನಿಂದ ಮನೆಗೆ ವಾಪಸಾಗಿದ್ದಳು. ಚೆನ್ನೈನ ಶೋಲಾವರಂನಲ್ಲಿ ಹುಡುಗಿ ಸ್ವಂತ ತಾಯಿ ಮತ್ತು ತಾಯಿಯ ಹೊಸ ಗಂಡನ ಜೊತೆ ವಾಸವಾಗಿದ್ದಾಳೆ.
ಮೂಲಗಳ ಪ್ರಕಾರ ಸಂತ್ರಸ್ಥೆಯ ಅಮ್ಮ ಕೂಡ ಏಡ್ಸ್ ರೋಗಿಯಾಗಿದ್ದು, ಕಳೆದ ವರ್ಷ ಬೆಂಗಳೂರಿನಿಂದ ಚೆನ್ನೈಗೆ ಬಂದಿದ್ದಾಳೆ. ಈ ಹಿಂದೆ ಚೆನ್ನೈ ತೊರೆದು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಆಕೆ, ಅಲ್ಲಿ ಆರೋಪಿಯ ಪರಿಚಯವಾಗಿದೆ. ಪರಿಚಯ ಪ್ರೀತಿಯಾಗಿ ಬೆಳೆದು ನಂತರ ಆರೋಪಿಯನ್ನು ಮದುವೆಯಾಗಿ ಚೆನ್ನೈಗೆ ಹೋಗಿದ್ದಾರೆ. ಆತನಿಂದಲೇ ಆಕೆಗೂ ಏಡ್ಸ್ ರೋಗ ತಗುಲಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಹೆಂಡತಿ ಕೆಲಸಕ್ಕೆ ಆಚೆ ಹೋದ ವೇಳೆ ಆರೋಪಿ, ಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಗಿಯನ್ನು ಕೌನ್ಸೆಲಿಂಗ್ ಗೆ ಕಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
PublicNext
21/09/2021 03:06 pm