ಬೆಂಗಳೂರು: ನಗರದ 'ರಾಜಸ್ಥಾನದ ಜಿತೇಂದರ್ ಸಿಂಗ್, ಕಾಟನ್ ಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಾ, ಭಾರತೀಯ ಸೇನಾಧಿಕಾರಿ ವೇಷದಲ್ಲಿ ಓಡಾಡಿ ಸೇನೆಗೆ ಸಂಬಂಧಪಟ್ಟ ಸ್ಥಳಗಳ ಫೋಟೊ ಸಮೇತ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ ಐಗೆ ಕಳುಹಿಸುತ್ತಿದ್ದ ಆರೋಪದಡಿ ಬಂಧಿಸಲಾಗಿದೆ.
ಭಾರತೀಯ ಸೇನೆಯ ಗುಪ್ತದಳ ವಿಭಾಗದ ಅಧಿಕಾರಿಗಳು ಆತನ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದರು. ಸೇನೆ ಕಮಾಂಡರ್ ಗಳ ಜೊತೆಯಲ್ಲೇ ಕಾರ್ಯಾಚರಣೆ ನಡೆಸಿ ಜಾಲಿ ಮೊಹಲ್ಲಾ ಬಳಿ ಜಿತೇಂದರ್ ನನ್ನು ಸೆರೆ ಹಿಡಿಯಲಾಗಿದೆ. 'ಸೇನಾಧಿಕಾರಿ ಬಟ್ಟೆ ತೊಟ್ಟು ರಾಜಸ್ಥಾನದ ಬಾರ್ಮೆರ್ ಸೇನಾ ನೆಲೆಗೆ ಇತ್ತೀಚೆಗೆ ಹೋಗಿದ್ದ ಆರೋಪಿ, ಅಲ್ಲಿನ ಫೋಟೊಗಳನ್ನು ಐಎಸ್ ಐಗೆ ಕಳುಹಿಸಿದ್ದ.
ಪೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡು 'ಪಾಕಿಸ್ತಾನದ ವ್ಯಕ್ತಿಯೊಬ್ಬರದ ಜೊತೆ ಭಾರತೀಯನೊಬ್ಬ ಚಾಟಿಂಗ್ ಮಾಡಿದ್ದ ಸುಳಿವು ಸೇನೆಗೆ ಸಿಕ್ಕಿತ್ತು. ಈ ಬಗ್ಗೆ ಪರಿಶೀಲಿಸಿದಾಗ, ಆರೋಪಿಯ ಫೇಸ್ಬುಕ್ ಚಾಟಿಂಗ್ ಮಾಹಿತಿ ಸಿಕ್ಕಿತ್ತು. ಅದೇ ಸುಳಿವು ಆಧರಿಸಿಯೇ ಆರೋಪಿಯನ್ನು ಬಂಧಿಸಲಾಗಿದೆ' ಎಂದೂ ಸಿಸಿಬಿ ಮೂಲಗಳು ತಿಳಿಸಿವೆ.
'ಆರೋಪಿ ಜಿತೇಂದರ್ ಸಿಂಗ್, ದೇಶದ 6 ಸೇನಾ ನೆಲೆಗಳ ರಹಸ್ಯ ಮಾಹಿತಿಯನ್ನು ಪಾಕ್ ಐಎಸ್ ಐಗೆ ಕಳುಹಿಸಿದ್ದಾನೆ. ಆತನ ಮೊಬೈಲ್ ಜಪ್ತಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ' ಎಂದೂ ಮೂಲಗಳು ಹೇಳಿವೆ. 'ಆರೋಪಿಯ ಕೆಲಸಕ್ಕೆ ಹಣವೂ ಸಂದಾಯವಾಗಿರುವ ದಾಖಲೆಗಳು ಸಿಕ್ಕಿವೆ. ಈ ಬಗ್ಗೆಯೂ ತನಿಖೆ ಮುಂದುವರಿದಿದೆ'.
PublicNext
21/09/2021 12:12 pm