ಕಲಬುರಗಿ: ಕೊಟ್ಟ 16 ಲಕ್ಷ ರೂ. ವಾಪಸ್ ಕೊಡದೆ ಸತಾಯಿಸಿದ ಪ್ರಿಯಕರನನ್ನು ಕೊಲೆ ಮಾಡಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಬಿಹಾರ ಮೂಲದ ಸನ್ ಬಿರ್ ಸಿಂಗ್ (27) ಕೊಲೆಯಾದ ಯುವಕ. ಆಳಂದ ಮೂಲದ ಮಹಾನಂದಾ ಕೊಲೆ ಮಾಡಿಸಿ ಮಹಿಳೆಯಾಗಿದ್ದು, ಕೊಲೆ ಮಾಡಿದ ಮಹಾನಂದಾ, ಸುನೀಲ್, ಮಂಜ, ಮಾರುತಿ, ಅಶೋಕ್ ಹಾಗೂ ಅಂಬರೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾನಂದಾ ಹಾಗೂ ಸನ್ ಬಿರ್ ಸಿಂಗ್ ಕಳೆದ ಆರು ವರ್ಷದಿಂದ ಲಿವಿಂಗ್ ಟುಗೇದರ್ನಲ್ಲಿದ್ದರು. ಈ ಸಮಯದಲ್ಲಿ ಮಹಾನಂದಾಳಿಂದ ಸನ್ ಬಿರ್ 16 ಲಕ್ಷ ರೂ. ಪಡೆದುಕೊಂಡಿದ್ದ. ಆದರೆ ಈಗ ಹಣ ಪಡೆದು ಕೊಡದೆ ಸತಾಯಿಸುತ್ತಿದ್ದ. ಅಷ್ಟೇ ಅಲ್ಲದೆ ಮಹಾನಂದ ಮನೆಯಲ್ಲಿ ಇಲ್ಲದೆ ಇದ್ದಾಗ ಆಕೆಯ ತಂಗಿಯ ಮೇಲೆಯೂ ಸನ್ ಬಿರ್ ಲೈಂಗಿಕ ದೌರ್ಜನ್ಯ ಎಸಗಿದ್ದ. ತಂಗಿಯ ಬಳಿಕ ಮತ್ತೊಬ್ಬ ಮಹಿಳೆಯನ್ನ ಮನೆಗೆ ಕಲೆದುಕೊಂಡು ಬಂದು ಸರಸವಾಡಿದ್ದ.
ಸನ್ ಬಿರ್ ಸಿಂಗ್ ಕೃತ್ಯದಿಂದ ರೋಸಿ ಹೋಗಿದ್ದ ಮಹಾನಂದಾ ಸಂಚು ರೂಪಿಸಿ, ಸನ್ ಬೀರ್ನ ಕೊಲೆಗೆ 5 ಲಕ್ಷ ರೂ.ಕ್ಕೆ ಸುಪಾರಿ ನೀಡಿದ್ದಳು. ಬಳಿಕ ಹಂತಕರ ಸನ್ ಬಿರ್ ಕೊಲೆ ಮಾಡಿ ರೈಲ್ವೆ ಹಳಿ ಮೇಲೆ ಶವವನ್ನು ಬಿಸಾಡಿ ಹೋಗಿದ್ದರು. ಈ ಸಂಬಂಧ ಆರು ಆರೋಪಿಗಳನ್ನು ವಾಡಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
PublicNext
15/09/2021 04:38 pm