ಭೋಪಾಲ್: ಮಧ್ಯಪ್ರದೇಶದ ಧಾರ ಜಿಲ್ಲೆಯ ಜ್ಞಾನಪುರದಲ್ಲಿರುವ ಹನುಮಂತ ದೇವಾಲಯದ ಅರ್ಚಕರೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಅರುಣದಾಸ್ (65) ಕೊಲೆಯಾದ ಅರ್ಚಕ. ಮೂಲತಃ ಉತ್ತರ ಪ್ರದೇಶದ ಅರುಣದಾಸ್ ಕಳೆದ 6-7 ವರ್ಷಗಳಿಂದ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅರುಣದಾಸ್ ಅವರ ರಕ್ಷಣೆಗೆ ಬಂದ ದೇವಾಲಯದ ಕಾವಲುಗಾರನ ಮೇಲೂ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.
ಸಪ್ಟೆಂಬರ 12ರಂದು ದೇವಾಲಯದ ಸಮೀಪದಲ್ಲಿದ್ದ ಕೆಲವರನ್ನು ಅರ್ಚಕ ಅರುಣದಾಸ್ ಅವರು ಇಲ್ಲಿ ನೀವೇನು ಮಾಡುತ್ತಿರುವಿರಿ? ಎಂದು ವಿಚಾರಿಸಿದ್ದರು. ಈ ವೇಳೆ ದುಷ್ಕರ್ಮಿಗಳು ಅರ್ಚಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೋಲುಗಳಿಂದ ಅಮಾನುಷವಾಗಿ ಹೊಡೆದಿದ್ದಾರೆ. ಇದೇ ಸಮಯದಲ್ಲಿ ಅವರನ್ನು ಕಾಪಾಡಲು ಬಂದ ಕಾವಲುಗಾರ ರಾಹುಲ್ ಅವರನ್ನು ಸಹ ದುಷ್ಕರ್ಮಿಗಳು ಹೊಡೆದಿದ್ದಾರೆ.
ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಅರ್ಚಕ ಅರುಣದಾಸ್ ಹಾಗೂ ಕಾವಲುಗಾರ ರಾಹುಲ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಅರುಣದಾಸ್ ಸಾವನ್ನಪ್ಪಿದ್ದಾರೆ.
PublicNext
15/09/2021 02:38 pm