ಶಿವಮೊಗ್ಗ: ಮದುವೆಯಾಗದೆಯೇ ಯುವತಿಯೋರ್ವಳು ಗಂಡುಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹೆರಿಗೆಯಾದ ಎರಡು ಗಂಟೆಯ ಒಳಗಾಗಿ ಹಸುಗೂಸು ಸೇರಿದಂತೆ ತಾಯಿಯೂ ಸಾವನ್ನಪ್ಪಿದ್ದಾಳೆ. ಈ ಎಲ್ಲ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಂಭವಿಸಿದೆ. ಸದ್ಯ ಆ ಮಗುವಿನ ತಂದೆ ಯಾರು? ಎಂಬ ಪ್ರಶ್ನೆ ಉದ್ಭವವಾದಾಗ ಯುವತಿಯ ತ್ರಿಕೋನ ಪ್ರೇಮಕಥೆ ರೀವಿಲ್ ಆಗಿದೆ.
ಹೌದು ಶಿವಮೊಗ್ಗ ತಾಲೂಕು ಕುಂಸಿ ಗ್ರಾಮದ ಉಪ್ಪಾರ ಕೇರಿಯ ಅಶ್ವಿನಿ ಮೃತ ಯುವತಿ. ಆಯನೂರು ಸಮೀಪದ ಗ್ರಾಮದ ಮಧುಸೂದನ್ ಎಂಬಾತನನ್ನು ಪ್ರೀತಿಸುತ್ತಿದ್ದಳು.
ಮುಂದೆ ಉದ್ಯೋಗ ಅರಸಿ ಯುವತಿ ಮೈಸೂರಿಗೆ ತೆರಳಿ ಅಲ್ಲಿ ಬಸವರಾಜ್ ಎಂಬಾತನೊಂದಿಗೆ ಪ್ರೀತಿ,ಪ್ರೇಮ ಶುರುಮಾಡಿದ್ದಾಳೆ. ಇದೇ ವೇಳೆಗೆ ಕೊರೊನಾ ಲಾಕ್ ಡೌನ್ ಆಗಿದ್ದರಿಂದ ಸ್ವಗ್ರಾಮಕ್ಕೆ ಬರುವಾಗ ತನ್ನೊಂದಿಗೆ ಬಸವರಾಜನನ್ನೂ ಕರೆದುಕೊಂಡು ಬಂದಿದ್ದಳು. ಬಸವರಾಜ್ ಬಗ್ಗೆ ಮನೆಯವರು ವಿಚಾರಿಸಿದಾಗ ಆತ ನನ್ನ ಸ್ನೇಹಿತ. ಲಾಕ್ ಡೌನ್ ಹಿನ್ನೆಲೆಯಲ್ಲಿ ನನ್ನೊಂದಿಗೆ ಬಂದಿದ್ದಾನೆ, ಕೆಲ ದಿನದಲ್ಲೇ ಮತ್ತೆ ಮೈಸೂರಿಗೆ ಹೋಗುತ್ತಾನೆ ಎಂದಿದ್ದಳು. ಆದರೆ, ಮನೆಯವರು ಬಸವರಾಜ್ ಬಗ್ಗೆ ಪದೇಪದೆ ಪ್ರಶ್ನೆ ಮಾಡಲಾರಂಭಿಸಿದಾಗ ಬಸವರಾಜ್ ವಾಪಸ್ ಮೈಸೂರಿಗೆ ತೆರಳಿದ್ದ.
ಬಸವರಾಜ್ ಮೈಸೂರಿಗೆ ತೆರಳಿದ ಕೆಲದಿನಗಳ ಬಳಿಕ ಅಶ್ವಿನಿ ಆರೋಗ್ಯದಲ್ಲಿ ಏರುಪೇರಾಗಲಾರಂಭಿಸಿತ್ತು. ಒಂದು ದಿನ ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದ ಅಶ್ವಿನಿಯನ್ನು ಪಾಲಕರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಆಕೆ ಗರ್ಭಿಣಿ ಎಂದು ಗೊತ್ತಾಗಿದೆ. ಅಂದೇ ಹೊಟ್ಟೆ ನೋವು ಹೆಚ್ಚಾಗಿ ಅವಧಿ ಪೂರ್ವ ಹೆರಿಗೆಯೂ ಆಗಿದೆ.
ಈ ವೇಳೆ ಮಗು ಬದುಕಲಿಲ್ಲ. ಮಗು ಮೃತಪಟ್ಟ ಎರಡು ಗಂಟೆಯಲ್ಲೇ ಅಶ್ವಿನಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ.
ತಾಯಿ ಹಾಗೂ ಕುಸು ಇಬ್ಬರೂ ಮೃತಪಡುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಕುಂಸಿ ಠಾಣೆ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಅಶ್ವಿನಿ ಗರ್ಭಿಣಿಯಾಗಲು ಕಾರಣ ಯಾರು? ಎನ್ನುವ ಪತ್ತೆಗೆ ಮುಂದಾಗಿದ್ದಾರೆ. ಸದ್ಯ ಆಕೆಯ ಇಬ್ಬರು ಪ್ರಿಯತಮರ ರಕ್ತದ ಮಾದರಿ ತೆಗೆದುಕೊಂಡ ಪೊಲೀಸರು ಮಗುವಿನ ಡಿಎನ್ ಎ ವರದಿ ಬಂದ ಬಳಿಕ ತಂದೆಯಾರೆಂದು ತಿಳಿಯಲು ಸಾಧ್ಯ ಎಂದಿದ್ದಾರೆ.
PublicNext
14/09/2021 03:31 pm