ಚೆನ್ನೈ : ಬಟ್ಟೆ ಖರೀದಿಯ ಸೊಗಿನಲ್ಲಿ ಬಂದ ಯುವನೊಬ್ಬ ಬರೋಬ್ಬರಿ 10 ಟೀ ಶರ್ಟ್ ಕದ್ದು ಮಾಲೀಕನ ಕೈಯಲ್ಲಿ ಸಿಕ್ಕಿಬಿದ್ದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಹೌದು ಆರೋಪಿ ಯುವಕನನ್ನು ತುತುಕುಡಿಯ ಸೆಲ್ವಮಧನ್ ಎಂದು ಗುರುತಿಸಲಾಗಿದ್ದು, ತಮಿಳುನಾಡಿನ ತಿಸಾಯನವಿಲೈ ಬಳಿಯ ಬಟ್ಟೆ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಹಬ್ಬ ಇದ್ದ ಕಾರಣ ಹೆಚ್ಚು ಜನ ತುಂಬಿದ ಅಂಗಡಿಗೆ ನುಗ್ಗಿ ಲಾಭ ಗಳಿಸಲು ಪ್ರಯತ್ನಿಸಿದ ಆರೋಪಿ ಸಿಕ್ಕಿಹಾಕಿಕೊಂಡಿದ್ದಾನೆ.
ಮೊದಲಿಗೆ ಅಂಗಡಿಯ ಕೆಲಸಗಾರರಿಗೆ ಟೀ ಶರ್ಟ್ ಕೇಳಿ ನಂತರ ಅದನ್ನು ಟ್ರಯಲ್ ರೂಮ್ ನಲ್ಲಿ ಧರಿಸಿ ಪರಿಶೀಲಿಸುವುದಾಗಿ ಹೇಳಿ ಹೋಗಿದ್ದಾನೆ. ಆದರೆ ಬಳಿಕ ಟೀ ಶರ್ಟ್ ಇಲ್ಲದೇ ಟ್ರಯಲ್ ರೂಮ್ ನಿಂದ ಹೊರಗೆ ಬಂದಾಗ, ಆರೋಪಿಯನ್ನು ಅಂಗಡಿಯವರು ಟೀಶರ್ಟ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಆಗ ಟೀ ಶರ್ಟ್ ಸೈಜ್ ಸರಿ ಇಲ್ಲ ಎಂದು ಅದನ್ನು ಟ್ರಯಲ್ ರೂಮ್ ನಲ್ಲಿಯೇ ಬಿಟ್ಟಿರುವುದಾಗಿ ಸೆಲ್ವಂ ಮಧನ್ ಹೇಳಿದ್ದಾನೆ.
ಅನುಮಾನಗೊಂಡ ಅಂಗಡಿ ಮಾಲೀಕರು ಆರೋಪಿಗೆ ಬಟ್ಟೆಯನ್ನು ತೆಗೆಯುವಂತೆ ಸೂಚಿಸಿದ್ದಾರೆ. ಆಗ ಆರೋಪಿ 5 ಟೀಶರ್ಟ್ ಧರಿಸಿ, ಪಂಚೆಯೊಳಗೆ 5 ಟೀ ಶರ್ಟ್ ಬಚ್ಚಿಟ್ಟಿಕೊಂಡಿರುವುದು ಪತ್ತೆಯಾಗಿದೆ. ಆದರೆ ಈ ಘಟನೆ ಸಂಬಂಧ ಮಾಲೀಕರು ಯಾವುದೇ ದೂರು ನೀಡಿಲ್ಲ.
PublicNext
10/09/2021 03:16 pm