ಚೆನ್ನೈ: ತಮಿಳುನಾಡಿನಲ್ಲಿ ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಕ್ರೂರಿ ತಾಯಿಯನ್ನು ಈಗಾಗಲೇ ಅರೆಸ್ಟ್ ಮಾಡಲಾಗಿದೆ. ಮಗುವಿನ ಹಲ್ಲೆ ಮಾಡಿದ್ದಕ್ಕೆ ನೈಜ ಕಾರಣವನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ. ಮದುವೆಗಾಗಿದ್ದರೂ ಆಕೆಗೆ ಹಳೆಯ ಲವರ್ ಜೊತೆಗೆ ಸಂಪರ್ಕ ಇತ್ತು. ಆತ ಆಗಾಗ ಈಕೆಗೆ ಕರೆ ಮಾಡ್ತಿದ್ದ. ಕರೆ ಮಾಡಿದಾಗ ನಿನ್ನ ಮಗು ಥೇಟ್ ನಿನ್ನ ಗಂಡನನ್ನೇ ಹೋಲುತ್ತೆ ಎಂದು ಕಿಚಾಯಿಸಿದ್ದಾನೆ. ಇದೇ ಕಾರಣಕ್ಕೆ ಆಕೆ ಮಗುವಿನ ಮೇಲೆ ಹಲ್ಲೆ ಮಾಡಿ ಅದರ ವಿಡಿಯೋವನ್ನು ಪ್ರಿಯಕರನಿಗೆ ಹರಿಬಿಟ್ಟಿದ್ದಾಳೆ. ಈ ವಿಡಿಯೋ ಆಕೆಯ ಪ್ರಿಯಕರನ ಮೊಬೈಲ್ ನಿಂದಲೇ ವೈರಲ್ ಆಗಿದೆ ಎಂದು ತಮಿಳುನಾಡು ಪೊಲೀಸರು ಹೇಳಿದ್ದಾರೆ.
PublicNext
02/09/2021 04:16 pm