ಚಿಕ್ಕಬಳ್ಳಾಪುರ: ವೀಕೆಂಡ್ ಪ್ರವಾಸಕ್ಕೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಯುವಕ, ಯುವತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಸುಲಿಗೆ ಮಾಡಿದ್ದಾರೆ. ಜಿಲ್ಲೆಯ ದೇವನಹಳ್ಳಿ ತಾಲೂಕು ತಿಂಡ್ಲು ಸರ್ಕಲ್ ಬಳಿ ಈ ಘಟನೆ ನಡೆದಿದೆ. ಈ ಯುವಕ, ಯುವತಿ ನಂದಿಬೆಟ್ಟಕ್ಕೆ ಹೋಗಿ ವಾಪಸ್ ಬರುತ್ತಿದ್ದರು ಎನ್ನಲಾಗಿದೆ.
ವೀಕೆಂಡ್ ಎಂದು ಕಳೆದ ಶನಿವಾರ ಬೆಂಗಳೂರಿನ ಅತುಲ್ ಕತ್ರಿ ಎನ್ನುವವರು ತನ್ನ ಸ್ನೇಹಿತೆ ದಿವ್ಯಾ ಜೊತೆ ವಿಶ್ವವಿಖ್ಯಾತ ನಂದಿಗಿರಿಧಾಮದತ್ತ ಬಂದಿದ್ದಾರೆ. ಈ ವೇಳೆ ನಂದಿಬೆಟ್ಟ ಬಂದ್ ಆಗಿರುವ ವಿಚಾರ ಗೊತ್ತಾಗಿದೆ. ಗಿರಿಧಾಮ ಬಂದ್ ಆಗಿದ್ದನ್ನು ತಿಳಿದು ಮತ್ತೆ ನಂದಿಬೆಟ್ಟ ಚಪ್ಪರಕಲ್ಲು ಐವಿಸಿ ರೋಡ್ ತಿಂಡ್ಲು ಸರ್ಕಲ್ ಮಾರ್ಗವಾಗಿ ಯಲಹಂಕದ ಕಡೆಗೆ ಬೈಕ್‍ನಲ್ಲಿ ಬರುತ್ತಿದ್ದರು. ಇದೇ ವೇಳೆ ಅಲ್ಲಿಗೆ ಬಂದ ಇಬ್ಬರು ಯುವಕರು ಇವರನ್ನು ಅಡ್ಡಗಟ್ಟಿ ಧಮ್ಕಿ ಹಾಕಿದ್ದಾರೆ. ಷೋಕಿ ಮಾಡೋಕೆ ಇಲ್ಲಿ ತಿರುಗಾಡುತ್ತಿದ್ದೀರಾ? ಎಂದು ಬೆದರಿಸಿ ದಿವ್ಯಾ ಅವರ ಪರ್ಸ್ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾರೆ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
31/08/2021 03:40 pm