ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದ್ಯಪಾನ ಬಿಡುವಂತೆ ಒತ್ತಾಯಿಸಿದ ಪತ್ನಿಯನ್ನೇ ಕೊಂದ ಪತಿ.!

ದಾವಣಗೆರೆ: ಮದ್ಯಪಾನ ಬಿಟ್ಟು ಬಿಡಿ ಎಂದು ಬುದ್ಧಿ ಹೇಳಿದ ಪತ್ನಿಯನ್ನು ಪತಿಯೇ ಕೊಲೆಗೈದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ನಡೆದಿದೆ.

ಸೊರಟೂರು ಗ್ರಾಮದ ಗಿರೀಶ್ ತನ್ನ ಪತ್ನಿ ಶಿಲ್ಪಾಳನನ್ನು (40) ಕೊಲೆಯಾದ ಮಾಡಿದ್ದಾನೆ. ಎರಡು ವರ್ಷಗಳಿಂದ ಸೊರಟೂರು ಗ್ರಾಮದಲ್ಲಿ ಗಿರೀಶ್ ಹಾಗೂ ಶಿಲ್ಪಾ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪ್ರತಿನಿತ್ಯ ಕುಡಿದು ಬರುತ್ತಿದ್ದ ಗಿರೀಶ್‌ಗೆ ಶಿಲ್ಪಾ ಬುದ್ಧಿ ಮಾತು ಹೇಳುತ್ತಿದ್ದರು. ಈ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ಕೂಡ ಆಗಿತ್ತು.

ಗಿರೀಶ್ ಎಂದಿನಂತೆ ನಿನ್ನೆ (ಭಾನುವಾರ) ಕೂಡ ಕುಡಿಯಲು ಹಣ ಕೊಡುತ್ತಿಲ್ಲ, ಬುದ್ಧಿಮಾತು ಹೇಳುತ್ತೀಯಾ ಎಂದು ಪತ್ನಿಯ ಜೊತೆಗೆ ಜಗಳ ಆರಂಭಿಸಿದ್ದಾನೆ. ಈ ವೇಳೆ ಕೋಪಗೊಂಡು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಹೊನ್ನಾಳಿ ಸಿಪಿಐ ದೇವರಾಜ್ ತಂಡವು ಶಿಲ್ಪಾಳ ಕೊಲೆಯಾದ 8 ಗಂಟೆಯಲ್ಲಿಯೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಹೊನ್ನಾಳಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Vijay Kumar
PublicNext

PublicNext

31/08/2021 02:53 pm

Cinque Terre

41.61 K

Cinque Terre

1