ಹಾಸನ: ಎಣ್ಣೆ ಏಟಿನಲ್ಲಿ ಬೇಕಾಬಿಟ್ಟಿ ಬೈಕ್ ಓಡಿಸುತ್ತಾ ಬಸ್‌ಗೆ ಜಾಗ ಬಿಡದೆ ಸತಾಯಿಸಿದ ಯುವಕನೋರ್ವನಿಗೆ ಸಾರ್ವಜನಿಕರು ಗೂಸಾ ಕೊಟ್ಟು ನಶೆ ಇಳಿಸಿದ್ದಾರೆ.
ಹೌದು. ಹಾಸನ ಜಿಲ್ಲೆ ಆಲೂರು ತಾಲೂಕಿನ ವೈ.ಎನ್.ಪುರ ಬಳಿ ಘಟನೆ ನಡೆದಿದ್ದು, ಯುವಕನೊಬ್ಬ ಬಸ್‌ಗೆ ಅಡ್ಡಬಂದು ಒಮ್ಮೆ ರಸ್ತೆಯ ಈಚೆಗೂ, ಇನ್ನೊಮ್ಮೆ ರಸ್ತೆಯ ಆಚೆ ಬದಿಗೂ ಬೈಕ್ ಚಲಾಯಿಸುತ್ತಾ ಅಪಾಯಕಾರಿಯಾಗಿ ವರ್ತಿಸಿದ್ದಾನೆ. ಈತನ ಆಟಾಟೋಪವನ್ನು ಸಹಿಸಿಕೊಂಡ ಬಸ್ ಚಾಲಕ ಸುಮಾರು ದೂರ ನಿಧಾನಕ್ಕೆ ಬಸ್ ಚಲಾಯಿಸಿದ್ದಾರೆ. ಕೊನೆಗೆ ಅದೇ ಹಾದಿಯಲ್ಲಿ ಬಂದ ಇನ್ನಿತರ ಬೈಕ್ ಸವಾರರು ಆತನನ್ನು ಅಡ್ಡಗಟ್ಟಿ ಹಿಡಿದು ಸರಿಯಾಗಿ ಥಳಿಸಿ ಬುದ್ಧಿ ಕಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
30/08/2021 05:00 pm